ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್ ಅಂದ್ರು ಫ್ಯಾನ್ಸ್! ವಿಜಯ್ ಜೊತೆಗಿನ ಪ್ರೀತಿಯನ್ನ ಈ ರೀತಿ ಒಪ್ಪಿಕೊಂಡ್ರಾ ಕಿರಿಕ್ ಬ್ಯೂಟಿ?
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ವಿಚಾರ ಆಗಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ರಶ್ಮಿಕಾ ಮತ್ತು ವಿಜಯ್ ಮಾತ್ರ ತಮ್ಮಿಬ್ಬರದ್ದು ಸುಂದರ ಸ್ನೇಹ ಎಂದೇ ಹೇಳುತ್ತಾರೆ.
ಆದ್ರೆ ಇದೀಗ ರಶ್ಮಿಕಾ ಆಡಿದ ಕೆಲವು ಮಾತುಗಳು ಫ್ಯಾನ್ಸ್ ಗೆ ಖುಷಿ ತಂದಿದೆ. ವಿಜಯ್ ದೇವರಕೊಂಡ ಜೊತೆಗಿನ ಪ್ರೀತಿಯ ಬಗ್ಗೆ ಈ ರೀತಿ ಮಾತಾಡುವ ಮೂಲಕ ರಶ್ಮಿಕಾ ರಿಲೇಷನ್ಶಿಪ್ ಬಗ್ಗೆ ಸುಳಿವು ನೀಡಿದಂತಿದೆ ಎನ್ನಲಾಗಿದೆ.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅವರ ಸಿನಿಮಾ ಸಮಾರಂಭಕ್ಕೆ ರಶ್ಮಿಕಾ ಅತಿಥಿಯಾಗಿ ಹೋಗಿದ್ದರು.
ಕಾರ್ಯಕ್ರಮದಲ್ಲಿ ನಟ ಆನಂದ್, ರಶ್ಮಿಕಾ ಮಂದಣ್ಣ ಅವರಿಗೆ ತಮ್ಮ ನೆಚ್ಚಿನ ಕೋ ಸ್ಟಾರ್ ಯಾರು ಎಂದು ಕೇಳುತ್ತಾರೆ. ಈ ಪ್ರಶ್ನೆ ಕೇಳುತ್ತಿದ್ದಂತೆಯೃ ರಶ್ಮಿಆ ನಾಚಿಕೆಯಿಂದ ನಗುತ್ತಾರೆ.
ರೇ ಆನಂದ್, ನೀನು ನನ್ನ ಫ್ಯಾಮಿಲಿ ಸದಸ್ಯನಾಗಿ ಈ ರೀತಿ ಸಿಕ್ಕಿ ಹಾಕಿಸುವ ಪ್ರಶ್ನೆ ಕೇಳಬಾರದು ಎಂದು ತಮಾಷೆ ಮಾಡುತ್ತಾರೆ. ನನ್ನ ನೆಚ್ಚಿನ ಸಹನಟ ರೌಡಿ ಬಾಯ್ ಎಂದು ನಾಚುತ್ತಲೇ ವಿಜಯ್ ದೇವರಕೊಂಡ ಹೆಸರು ಹೇಳುತ್ತಾರೆ.
ರಶ್ಮಿಕಾ ಮಂದಣ್ಣ ಇಲ್ಲಿ ವಿಜಯ್ ದೇವರಕೊಂಡ ತಮ್ಮನನ್ನು ಫ್ಯಾಮಿಲಿ ಸದಸ್ಯ ಎಂದಿದ್ದು ವೈರಲ್ ಆಗಿದೆ. ಈ ಮೂಲಕ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಪ್ರೀತಿಯ ಸುಳಿವು ನೀಡಿರಬಹುದೇ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಫಿಕ್ಸ್ ಎಂದು ಟ್ರೋಲ್ ಮಾಡಲಾಗುತ್ತಿದೆ.