ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ವಿಯೆಟ್ನಾಂ ಪ್ರವಾಸ, ಎಂಗೇಜ್ಮೆಂಟ್‌ ವದಂತಿ ಬೆನ್ನಲ್ಲೇ ಇಂಥದ್ದೊಂದು ಸುದ್ದಿ!

Tue, 16 Jan 2024-5:52 pm,

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಪ್ರಮುಖ ನಟ. ರಶ್ಮಿಕಾ ಮತ್ತು ವಿಜಯ್  ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ  ಆನ್-ಸ್ಕ್ರೀನ್ ಕೆಮಿಸ್ಟ್ರಿ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಇವರಿಬ್ಬರು ಡೇಟಿಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಬಹಳ ದಿನಗಳಿಂದ ಇದೆ. 

ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ ಫೋಟೋ ವೈರಲ್ ಆಗಿದ್ದು, ರಶ್ಮಿಕಾ ಮಂದಣ್ಣ ಅವರೊಂದಿಗೆ ಪ್ರವಾಸ ಮಾಡಿದಂತಿದೆ. 

ವಿಯೆಟ್ನಾಮ್‌ಗೆ ಹೋದಾಗ ರಶ್ಮಿಕಾ ಆ ದೇಶದಲ್ಲೇ ವಿಶೇಷವಾಗಿ ತಯಾರಿಸಿದ ಟೋಪಿಗಳನ್ನು ಧರಿಸಿ ಫೋಟೋ ತೆಗೆದು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

ಇತ್ತ ವಿಜಯ್ ದೇವರಕೊಂಡ ಸಹ ವಿಯೆಟ್ನಾಮ್‌ ನಲ್ಲಿರುವಂತೆ ಭಾಸವಾಗುವ ಫೋಟೋಗಳನ್ನೇ ಶೇರ್‌ ಮಾಡಿದ್ದಾರೆ. ಈ ಇಬ್ಬರು ಒಂದೇ ಮನೆಯಲ್ಲಿ ಇರುತ್ತಾರೆ, ವಿದೇಶಕ್ಕೆ ಒಟ್ಟಿಗೆ ಪ್ರಯಾಣಿಸುತ್ತಾರೆ ಎಂದು ವದಂತಿಗಳಿವೆ.  

ಕೆಲವು ದಿನಗಳ ಹಿಂದೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link