ವಿಜಯ್ ದೇವರಕೊಂಡ ಮೇಲಿನ ಪ್ರೀತಿ ನಿಜ...! ಕೊನೆಗೂ ಒಪ್ಪಿಕೊಂಡ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ..!
ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2, ಸಿಕಂದರ್, ಚಾವಾ, ದಿ ಗರ್ಲ್ ಫ್ರೆಂಡ್, ಕುಬೇರುಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸುಂದರಿ ಕಳೆದ ಕೆಲವು ದಿನಗಳಿಂದ ನಟ ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮೇಲಾಗಿ ಅವರಿಬ್ಬರು ಟ್ರಿಪ್ ಹೋದಾಗಲೂ ಒಟ್ಟಾಗಿ ಸಿಕ್ಕಿಬಿದ್ದ ನಿದರ್ಶನಗಳೂ ಸಾಕಷ್ಟಿವೆ.
ಆದರೆ ಈ ಸುಂದರಿ ಇತ್ತೀಚೆಗೆ ಇಂಡಿಯನ್ ಐಡಲ್ ಗಾಯನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಕೆಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಪುಷ್ಪಾ ಸಿನಿಮಾದ ಬಗ್ಗೆ ಮಾತನಾಡುತ್ತಾ, "ಪುಷ್ಪಾ-1 ಗಿಂತ ಪುಷ್ಪಾ-2 ಮಹತ್ವವಾಗಿದೆ" ಎಂದು ಹೇಳಿದ್ದರು.
"ಹಾಗೆಯೇ ಈ ಸಿನಿಮಾ ಬಂಗಾರ ಮಾಯೆನೆ ಶ್ರೀವಲ್ಲಿ ಮತ್ತು ಡೀಯರ್ ಕಾಮ್ರೆಡ್ ಸಿನಿಮಾದ ʼಕಡಲಲ್ಲೇʼ ಹಾಡುಗಳು ನನಗೆ ತುಂಬಾ ಇಷ್ಟ. ಆದರೆ ಗೀತ ಗೋವಿಂದಂ ಚಿತ್ರದ ʼವಚ್ಚಿಂದಮ್ಮʼ ಹಾಡು ನನ್ನ ಹೃದಯ ಮುಟ್ಟಿದ ಹಾಡು" ಎಂದು ರಶ್ಮಿಕಾ ಹೇಳಿದ್ದಾರೆ.
ಅದೇ ಕಾರ್ಯಕ್ರಮದಲ್ಲಿ ನಿರೂಪಕ ಶ್ರೀರಾಮ್ ಚಂದ್ರ, ನಿಮಗೆ ಸಹನಟ ಅಥವಾ ಸಹೋದ್ಯೋಗಿ ಮೇಲೆ ಎಂದಾದರೂ ಪ್ರೀತಿ ಅಥವಾ ಕ್ರಶ್ ಆಗಿದೆಯೇ ಎಂದು ಕೇಳಿದಾಗ, ರಶ್ಮಿಕಾ ಮಂದಣ್ಣ ಹೌದು ಎಂದು ಉತ್ತರಿಸಿದ್ದಾರೆ.
ಅದೇ ಸಂದರ್ಭದಲ್ಲಿ ಅಲ್ಲಿದ್ದವರೆಲ್ಲಾ ನಕ್ಕರು. ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಾತನಾಡುತ್ತಿದ್ದಾರೆ ಎಂದು ಎಲ್ಲರೂ ಫಿಕ್ಸ್ ಆಗಿದ್ದರು. ಯಾಕೆಂದರೆ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದರು.
ಇನ್ನು ಈ ಮೂಲಕ ವಿಜಯ್ ಮೇಲೆ ಪ್ರೀತಿ ಇರೋದು ನಿಜ ಎಂಬುದನ್ನು ರಶ್ಮಿಕಾ ಮಂದಣ್ಣ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಇನ್ನೊಂದೆಡೆ ವಿಜಯ್ ದೇವರಕೊಂಡ ತಮ್ಮ ಮುಂದಿನ ಚಿತ್ರ ʼವಿಡಿ 12ʼ ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಆಕ್ಷನ್ ಡ್ರಾಮಾ ಸಿನಿಮಾ ಮುಂದಿನ ವರ್ಷ ಮಾರ್ಚ್ 28, 2025 ರಂದು ಬಿಡುಗಡೆಯಾಗಲಿದೆ.
ಇದೀಗ ವಿಜಯ್ ಅವರ ಪೋಸ್ಟರ್ʼಗೆ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದು ಬೆಂಕಿಯ ಎಮೋಜಿ ಜೊತೆ "ಮ್ಯಾಡ್ನೆಸ್" ಎಂದು ಬರೆದಿದ್ದಾರೆ. ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.