ಅನಂತ್-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..ಶ್ರೀವಲ್ಲಿ ಲೆಹಂಗಾದ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್ ಆಗೋದು ಖಂಡಿತಾ
ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಈ ಮಧ್ಯೆ ಮಂದಣ್ಣ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆಯಲ್ಲಿ ಮಿಂಚಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನಟಿ ಗ್ರ್ಯಾಂಡ್ ಲೆಹೆಂಗಾವನ್ನು ಧರಿಸಿದ್ದು ಎಲ್ಲರ ಮನ ಗೆದ್ದಿದ್ದಾರೆ.
ಅನಂತ್-ರಾಧಿಕಾ ಮದುವೆಗೆ ಧರಿಸಿದ್ದ ಲೆಹಂಗಾದಲ್ಲಿ ಫೋಟೊಸ್‌ಗೆ ಪೋಸ್ ಕೊಟ್ಟ ರಶ್ಮಿಕಾ ಮಂದನಾ ಈ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಶ್ಮಿಕಾ ಡಬಲ್ ದುಪ್ಪಟ್ಟಾದೊಂದಿಗೆ ಈ ಲೆಹಂಗಾವನ್ನು ಧರಿಸಿ ರಾಯಲ್ ಆಗಿ ಕಾಣುತ್ತಿದ್ದರು. ರಶ್ಮಿಕಾ ಅವರ ಮಸ್ಟರ್ಡ್ ಬಣ್ಣದ ಲೆಹೆಂಗಾದಲ್ಲಿ ಚಂದಾಮಾಮನಂತೆ ಕಂಡರು.
ರಶ್ಮಿಕಾ ಮಂದಣ್ಣ ಹೆವಿ ಲೆಹೆಂಗಾ, ಎರಡು ದುಪಟ್ಟಾ ಧರಿಸಿ ಡ್ರೆಸ್ ನಲ್ಲಿ ಗ್ರ್ಯಾಂಡ್ ಆಗಿ ಕಾಣಿಸಿಕೊಂಡಿದ್ದಾರೆ. ಹ್ಯಾಂಡ್ ವರ್ಕ್ ಲೆಹೆಂಗಾಗೆ ಹೊಂದಿಕೆಯಾಗುವಂತೆ ಭಾರವಾದ ಆಭರಣಗಳನ್ನು ಧರಿಸಿರುವ ಅವರು ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಎಲ್ಲರನ್ನು ತನ್ನತ ಆಕರ್ಶಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಧರಿಸಿರುವ ಈ ಲೆಹೆಂಗಾದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ರಶ್ಮಿಕಾ ಮಂದಣ್ಣ ಧರಿಸಿರುವ ಈ ಲೆಹೆಂಗಾದ ಬೆಲೆ ಎಷ್ಟು ಎಂದು ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಲು ಶುರುಮಾಡಿದ್ದಾರೆ.
ನಟಿ ರಶ್ಮಿಕಾ ಧರಿಸಿರುವ ಈ ಹಳದಿ ಬಣ್ಣದ ಲೆಹೆಂಗಾ ಬೆಲೆ 1 ಲಕ್ಷದ 25 ಸಾವಿರ ರೂ. ರಶ್ಮಿಕಾ ಲೆಹೆಂಗಾ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.