`ಭಾರವಾದ ಮನಸ್ಸಿನಿಂದ 5 ವರ್ಷಗಳ ಸುಂದರ ಪಯಣಕ್ಕೆ ವಿದಾಯ..` ದಿಢೀರನೇ ಭಾವುಕ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ ಮಂದಣ್ಣ..!ಕಾರಣ..?

Thu, 28 Nov 2024-8:16 am,

Rashmika Mandanna: ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪಾ 2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾ ತೆರೆಗೆ ಬರಲಿರುವ ಖುಷಿಯಲ್ಲಿರುವ ಫ್ಯಾನ್ಸ್‌ಗೆ ನ್ಯಾಶನಲ್‌ ಕ್ರಶ್‌ ಮಾಡಿರುವ ಅದೊಂದು ಪೋಸ್ಟ್‌ ಸಡನ್‌ ಶಾಕ್‌ ಕೊಟ್ಟಿದೆ.  

ರಶ್ಮಿಕಾ ಮಂದಣ್ಣ ಅವರ ಈ ಹೆಸರಿಗೆ ವಿಶೇಷ ಪರಿಚಯವೇನು ಅಗತ್ಯವಿಲ್ಲ. ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ಇವರು, ಇಂದಿನ ವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.  

ಒಂದಾದ ಮೇಲೊಂದು ಹಿಟ್‌ ಸಿನಿಮಾಗಳನ್ನು ಕೊಡುತ್ತಾ ಎಲ್ಲರನ್ನೂ ರಂಜಿಸುತ್ತಿರುವ ರಶ್ಮಿಕಾ ಮಂದಣ್ಣ ಅವರ ಡಿಮ್ಯಾಂಡ್‌ ದಿನೇ ದಿನೇ ಹೆಚ್ಚಾಗುತ್ತಾ ಇದೆ, ಇದರ ಬೆನ್ನಲ್ಲೆ ಅವರು ಸಲ್ಮಾನ್‌ ಖಾನ್‌ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ.  

ಆದರೆ, ಇದೀಗ ರಶ್ಮಿಕಾ ಮಂದಣ್ಣ ದಿಢಿರನೇ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಕೂ ಬೇಸರಗೊಂಡಿದ್ದಾರೆ.  

ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರ ಆ ಪೋಸ್ಟ್‌ನಲ್ಲಿ ಇರುವುದಾದರೂ ಏನು..? ತಿಳಿಯಲು ಮುಂದೆ ಓದಿ...  

ಪುಷ್ಪಾ 2 ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ, ಡಿಸೆಂಬರ್‌ 05 ರಂದು ತೆರೆಗೆ ಬರಲು ಸಿನಿಮಾ ಸಜ್ಜಾಗಿದೆ. ಸದ್ಯ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ.   

ಇದೀಗ ಇದರ ಬೆನ್ನಲ್ಲೆ ರಶ್ಮಿಕಾ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.   

"ಅದೇನೋ ಗೊತ್ತಿಲ್ಲ.. ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ. 7-8 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ನಾನು ಕಳೆದ 5 ವರ್ಷಗಳಿಂದ ಪುಷ್ಪಾ ಸಿನಿಮಾದ ಸೆಟ್‌ನಲ್ಲಿದ್ದೇನೆ. ಇಂದು ಇದಕ್ಕೆ ಕೊನೆಯ ದಿನ. ಏನೋ ಗೊತ್ತಿಲ್ಲದ ದುಃಖ. ಭವನೆಗಳೆಲ್ಲಾ ಒಮ್ಮಲೆಗೆ ಒಟ್ಟಾಗಿವೆ. ತುಂಬಾ ಸುಸ್ತಾಗಿದ್ದರೂ ಕೂಡ ಸಾಕಷ್ಟು ಹೆಮ್ಮೆ ಇದೆ."  

"ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರೊಂದಿಗೆ ತಂಡದೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ, ಆದರೆ ಈ 5 ವರ್ಷಗಳ ಸುಂದರ ಪಯಣ ಅಂತ್ಯವಾಗುತ್ತಿದೆ, ಎಂದು ಊಹಿಸಲು ಕೂಡ ಆಗುತ್ತಿಲ್ಲ, ನನಗೆ ತುಂಬಾ ದುಃಖವಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.  

ಸದ್ಯ ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿರುವ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ, ಪೋಸ್ಟ್‌ ನೋಡಿದ ಅಭಿಮಾನಿಗಳು ಬೇಸರಗೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link