ʻಅಂತಹʼ ಪಾತ್ರ ಮಾಡಲು ನಿರಾಕರಿಸಿ 150 ಕೋಟಿ ಸಿನಿಮಾ ರಿಜೆಕ್ಟ್ ಮಾಡಿದ ರಶ್ಮಿಕಾ ಮಂದಣ್ಣ..!ಗೋಲ್ಡನ್ ಚ್ಯಾನ್ಸ್ ಮಿಸ್ ಮಾಡಿಕೊಂಡ್ರಾ..?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಿರೀಕ್ ಪಾರ್ಟಿ ಸಿನಿಮಾದಿಂದ ಎಂಟ್ರಿ ಕೊಟ್ಟು, ಈಗ ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂತಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟಿಕೊಂಡಿರುವ ರಶ್ಮಿಕಾ ಮಂದಣ್ಣ 150 ಕೋಟಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ.
ಪ.ರಂಜಿತ್ ನಿರ್ದೇಶನದಲ್ಲಿ ನಟ ವಿಕ್ರಮ್, ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನನ್, ಪಶುಪತಿ ಮುಂತಾದವರು ನಟಿಸಿರುವ ಚಿತ್ರ ‘ತಂಗಳನ್’.
ಈ ಸಿನಿಮಾ ಕೂಡ 'ಕೆಜಿಎಫ್'ನಲ್ಲಿ ನೆಲೆಸಿದ್ದ ಆದಿವಾಸಿಗಳನ್ನು ಆಧರಿಸಿದೆ. ಅಭಿಮಾನಿಗಳ ಭಾರೀ ನಿರೀಕ್ಷೆಗಳ ನಡುವೆ ಆಗಸ್ಟ್ 15 ರಂದು 'ತಂಗಳನ್' ಚಿತ್ರ ಥಿಯೇಟರ್‌ಗೆ ಅಪ್ಪಳಿಸಿದೆ.
'ತಂಗಳನ್' ಚಿತ್ರ ನೋಡಲು ಅಭಿಮಾನಿಗಳು ಥಿಯೇಟರ್‌ಗಳತ್ತ ಮುಗಿ ಬೀಳುತ್ತಿದ್ದಾರೆ.
ಮಾಸ್ ರೆಸ್ಪಾನ್ಸ್ ಪಡೆದಿರುವ 'ತಂಗಳನ್' ಮೊದಲ ದಿನವೇ ಭಾರತದಲ್ಲಿ 12.6 ಕೋಟಿ ಕಲೆಕ್ಷನ್ ಮಾಡಿದೆ.
ಹೀಗಿರುವಾಗ ತಂಗಳನ್ ಚಿತ್ರದಲ್ಲಿನ ಆರತಿ ಪಾತ್ರಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಾಳವಿಕಾ ಮೋಹನನ್ ತಮ್ಮ ಅಭಿನಯದಿಂದ ಅಭಿಮಾನಿಗಳ ಹುಚ್ಚೆಬ್ಬಿಸಿದ್ದಾರೆ.
ನಿರ್ದೇಶಕ ಪಾ ರಂಜಿತ್ ಆರಂಭದಲ್ಲಿ ರಶ್ಮಿಕಾ ಮಂದನಾ ಅವರನ್ನು ಆರತಿ ಪಾತ್ರದಲ್ಲಿ ನಟಿಸಲು ಸಂಪರ್ಕಿಸಿದ್ದರು, ಆದರೆ ಸಾಲು ಸಾಲು ಸಿನಿಮಾಗಳು ಕೈಯಲ್ಲಿದ್ದ ಕಾರಣ ಡೇಟ್‌ಗಲ ಸಮಸ್ಯೆಯಿಂದ ರಶ್ಮಿಕಾ ಈ ಸಿನಿಮಾ ಮಾಡಲು ಒಲ್ಲೆ ಎಂದಿದ್ದರು.
ಆರತಿ ಪಾತ್ರವನ್ನು ರಶ್ಮಿಕಾ ಮಾಡಲು ಸಾಧ್ಯವಾಗದ ಕಾರಣ, ಪಾ ರಂಜಿತ್ ಅವರ ಸ್ಥಾನಕ್ಕೆ ನಟಿ ಮಾಳವಿಕಾ ಮೋಹನನ್ ಅವರನ್ನು ಆಯ್ಕೆ ಮಾಡಿದರು.
ಆದರೆ ಇದೇ ಪಾತ್ರಕ್ಕೆ ಇದೀಗ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನಿರೀಕೆಗೂ ಮೀರಿದ ರೆಸ್ಪಾನ್ಸ್ ಪಡೆಯುತ್ತಿದೆ.
ರಶ್ಮಿಕಾ ಮಂದಣ್ಣ ಈ ಸಿನಿಮಾ ಒಪ್ಪಿಕೊಳ್ಳದೆ ತಪ್ಪು ಮಾಡಿದ್ರಾ ಎನ್ನುವ ಚರ್ಚೆಗಳು ಇದೀಗ ಶುರುವಾಗಿದೆ.