ಉತ್ತರಾಧಿಕಾರಿಯನ್ನು ಮೊದಲೇ ನಿರ್ಧರಿಸಿದ್ದ ರತನ್ ಟಾಟಾ !7,900 ಕೋಟಿ ಆಸ್ತಿಯ ಅಸಲಿ ವಾರಸುದಾರನ ಹೆಸರು ವಿಲ್ ನಲ್ಲಿ ನಮೂದು !
ಮಲ ಸಹೋದರ ನೋಯೆಲ್ ಟಾಟಾಗೆ ಟಾಟಾ ಟ್ರಸ್ಟ್‌ನ ಸಾರಥ್ಯವನ್ನು ಈಗಾಗಲೇ ನೀಡಲಾಗಿದೆ. ಆದರೆ ರತನ್ ಟಾಟಾ ಅವರ 7900 ಕೋಟಿ ಮೌಲ್ಯದ ಆಸ್ತಿಯನ್ನು ಯಾರು ಪಡೆಯುತ್ತಾರೆ ಎನ್ನುವ ರಹಸ್ಯ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ.
ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ವಿಲ್ ಮಾಡಿಟ್ಟಿದ್ದಾರೆ. ಅವರು ತಮ್ಮ ಹಿಂದೆ 7,900 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.ಈ ಆಸ್ತಿ ಹೇಗೆ ಹಂಚಿಕೆಯಾಗಬೇಕು ಎನ್ನುವುದನ್ನು ರತನ್ ಟಾಟಾ ಸಾವಿಗೂ ಮುನ್ನವೇ ನಿರ್ಧರಿಸಿದ್ದರು. ಇನ್ನು ತಮ್ಮ ವಿಲ್ ಅನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು 4 ಜನರಿಗೆ ವಹಿಸಿದ್ದಾರೆ.
ರತನ್ ಟಾಟಾ ಅವರ ಉಯಿಲನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಅವರು ತಮ್ಮ ಆಪ್ತ ಸ್ನೇಹಿತ ಮತ್ತು ವೃತ್ತಿಯಲ್ಲಿ ವಕೀಲರಾದ ಡೇರಿಯಸ್ ಖಂಬಾಟಾ ಮತ್ತು ಸಹವರ್ತಿ ಮೆಹ್ಲಿ ಮಿಸ್ತ್ರಿ ಅವರಿಗೆ ವಹಿಸಿದ್ದಾರೆ.ಇದಲ್ಲದೆ,ತಮ್ಮ ಮಲ ಸಹೋದರಿಯರಾದ ಶಿರಿನ್ ಮತ್ತು ಡಯಾನಾ ಜೀಜೀಭೋಯ್ ಅವರ ಹೆಗಲ ಮೇಲೆಯೂ ಈ ಜವಾಬ್ದಾರಿ ಹಾಕಿದ್ದಾರೆ.
ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಪ್ರಕಾರ, ರತನ್ ಟಾಟಾ 7900 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರು ಟಾಟಾ ಸನ್ಸ್‌ನಲ್ಲಿ 0.83% ಪಾಲನ್ನು ಹೊಂದಿದ್ದರು. ಅವರು ಎರಡು ಡಜನ್‌ಗಿಂತಲೂ ಹೆಚ್ಚು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.Ola, Paytm, Traxon, FirstCry, Bluestone, CarDekho, CashKaro, Urban Company ಮತ್ತು Upstox ನಂತಹ ಹತ್ತಾರು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದಲ್ಲದೆ, ರತನ್ ಟಾಟಾ ಅವರು ತಮ್ಮ ವೈಯಕ್ತಿಕ ಹೂಡಿಕೆಯ ವಾಹನ RNT ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ 2023 ರ ವೇಳೆಗೆ 186 ಕೋಟಿ ರೂ ಹೂಡಿಕೆ ಮಾಡಿದ್ದಾರೆ. ಈ ಹೂಡಿಕೆಗಳನ್ನು ಹೊರತುಪಡಿಸಿ, ಅವರು ಮುಂಬೈನ ಕೊಲಾಬಾದಲ್ಲಿ ಮನೆ ಹೊಂದಿದ್ದಾರೆ.ಇದರೊಂದಿಗೆ ಅಲಿಬಾಗ್‌ನ ಅರಬ್ಬಿ ಸಮುದ್ರದ ತೀರದಲ್ಲಿ ಹಾಲಿಡೇ ಹೋಂ ಕೂಡಾ ಇದೆ.
ರತನ್ ಟಾಟಾ ಅವರ ಸ್ನೇಹಿತ ಮತ್ತು ವಕೀಲ ಖಂಬಟ್ಟಾ ವಿಲ್ ಸಿದ್ದಪಡಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಈ ವಿಲ್ ಕಾರ್ಯಗತಗೊಳಿಸಲು ನಿರ್ವಾಹಕರನ್ನು ನೇಮಿಸಲಾಗಿದೆ.
ಜೀಜೀಭೋಯ್ ಸಹೋದರಿಯರು ರತನ್ ಟಾಟಾ ಅವರ ತಾಯಿ ಸುನು ಅವರ ಪುತ್ರಿಯರು. ಸುನು ಅವರು ಜಮ್ ಶೆಡ್ಜಿ ಜೀಜೀಭೋಯ್ ಅವರನ್ನು ಎರಡನೇ ಮದುವೆಯಾದರು.ರತನ್ ಟಾಟಾ ಜೀಜೀಭೋಯ್ ಸಹೋದರಿಯರಿಗೆ ತುಂಬಾ ಹತ್ತಿರವಾಗಿದ್ದರು.ರತನ್ ಟಾಟಾ ಅವರಂತೆ, ಅವರ ಸಹೋದರಿಯರು ಪರೋಪಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.