ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಅವರ ಕನಸಿನ ಕಾರು; ಲುಕ್ ಹೊಸದು, ರೆಟ್ ಹಳೆಯದಂತೆ!
ರತನ್ ಟಾಟಾ ಹಲವು ಉದ್ಯಮಗಳನ್ನು ನಡೆಸಿ ಸೈ ಎನಿಸಿಕೊಂಡವರು. ಅದರಲ್ಲೂ ಮೋಟಾರ್ ಕಾರ್ ಉದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಅವರು ಹೆಚ್ಚಾಗಿ ಕನಸು ಕಂಡಿದ್ದು ನ್ಯಾನೋ ಕಾರುಗಳ ಬಗ್ಗೆ.
ರತನ್ ಟಾಟಾ ನ್ಯಾನೋ ಕಾರುಗಳ ಬಗ್ಗೆಯೇ ಏಕೆ ವಿಶೇಷ ಆಸಕ್ತಿ ವಹಿಸಿದ್ದರೆಂದರೆ, ಇದು ತುಂಬಾ ಚೀಪಾಗಿ ಸಿಗುವಂಥ ಕಾರು. ಮಧ್ಯಮವರ್ಗದವರು ಕೂಡ ಕಾರು ಖರೀದಿ ಮಾಡಬೇಕೆಂದು.
ಶ್ರೀಮಂತರು ದುಬಾರಿ ಕಾರುಗಳನ್ನು ಖರೀದಿ ಮಾಡಿದರೆ ಬದವರು ಕಡೆಯಪಕ್ಷ ನ್ಯಾನೋ ಕಾರನ್ನಾದರೂ ಕೊಳ್ಳುವಂತಾಗಲಿ ಎಂದು ಕನಸು ಕಂಡಿದ್ದರು ರತನ್ ಟಾಟಾ.
ರತನ್ ಟಾಟಾ ಇತ್ತೀಚಿಗೆ ನಿಧನರಾಗಿದ್ದು ಅವರ ಸ್ಮರಣಾರ್ಥ ಟಾಟಾ ಕಂಪನಿ ರತನ್ ಟಾಟಾ ಅವರ ಕನಸಿನ ನ್ಯಾನೋ ಕಾರನ್ನು ಹೊಸ ಲುಕ್ ನೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎನ್ನುವ ಮಾಹಿತಿಗಳು ತಿಳಿದುಬರುತ್ತಿವೆ.
ಹೊಸ ಲುಕ್ ನೊಂದಿಗೆ ಮಾರುಕಟ್ಟೆಗೆ ಬರುವ ನ್ಯಾನೋ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ 30 ಕಿಲೋ ಮೀಟರ್ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಹೊಸ ಲುಕ್ ನೊಂದಿಗೆ ಬರುವ ಈ ನ್ಯಾನೋ ಕಾರು ಸಾಮಾನ್ಯರಿಗೂ ಸುಲಭದ ಬೆಲೆಯಲ್ಲಿ ಸಿಗಬೇಕು ಎನ್ನುವ ಕಾರಣಕ್ಕೆ 2.5 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿರುತ್ತದೆಯಂತೆ.
ಹೊಸ ನ್ಯಾನೋ ಕಾರನ್ನು ಕೆಲವು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ರೂಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಈ ಎಲ್ಲಾ ವಿಷಯಗಳ ಬಗ್ಗೆ ಇನ್ನಷ್ಟೇ ಅಧಿಕೃತವಾದ ಮಾಹಿತಿಗಳು ಹೊರಬೀಳಬೇಕಾಗಿದೆ.