ರತನ್‌ ಟಾಟಾ ನೆನೆದು ಕಣ್ಣಿರಿಟ್ಟ ಖ್ಯಾತ ನಟಿ! ಮಾಜಿ ಪ್ರೇಮಿಯನ್ನು ನೆನೆದು ಭಾವುಕರಾದ್ರು ನಾಯಕಿ

Thu, 10 Oct 2024-4:58 pm,

ದೇಶದ ಪ್ರಖ್ಯಾತ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ಅವರ ಸಾವಿನ ಸುದ್ದಿ ಕೇಳಿ ಇಡೀ ದೇಶವೇ ಮರುಕ ವ್ಯಕ್ತಪಡಿಸುತ್ತಿರುವುದರ ನಡುವೆಯೆ ರತನ್ ಟಾಟಾ ಅವರ ಮಾಜಿ ಪ್ರೇಯಸಿ ಭಾವನಾತ್ಮಕವಾದ ವಿದಾಯ ಹೇಳಿದ್ದಾರೆ.

ರತನ್ ಟಾಟಾ 1960ರ ದಶಕದ ಆರಂಭದ ವೇಳೆ ಅಮೆರಿಕದಲ್ಲಿ ಕೆಲಸ ಮಾಡುವಾಗ ಒಬ್ಬರನ್ನು ಪ್ರೀತಿಸಿದ್ದರು. ಈ ಪ್ರೀತಿ ಮದುವೆಯ ಹಂತಕ್ಕೆ ಹೋಗಿ 1962ರ ಇಂಡೋ-ಚೀನಾ ಯುದ್ಧ ಮತ್ತಿತರ ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. 

ಬಳಿಕ ಚಿತ್ರ ನಟಿ ಸಿಮಿ ಗರೆವಾಲ್ ಅವರ ಪ್ರೇಮ ಪಾಶದಲ್ಲಿ ಸಿಲುಕಿದ್ದರು ‘ಭಾರತೀಯ ಕೈಗಾರಿಕಾ ಕ್ರಾಂತಿಯ ಹರಿಕಾರ’ ರತನ್ ಟಾಟಾ

ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಸಿಮಿ ಗರೆವಾಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ‘ನನ್ನ ಮತ್ತು ರತನ್ ಸಂಬಂಧ ತುಂಬಾ ಹಳೆಯದು’ ಎಂದಿದ್ದರು. ನಾಲ್ಕು ಸಂದರ್ಭಗಳಲ್ಲಿ ರತನ್ ಟಾಟಾ ಅವರನ್ನು ಪ್ರೀತಿಸುತ್ತಿದ್ದೆ ಆದರೆ ವಿವಿಧ ಕಾರಣಗಳಿಂದ ಅವರೊಂದಿಗೆ ಮದುವೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

ರತನ್ ಟಾಟಾ ಅವರೊಬ್ಬ ಪರಿಪೂರ್ಣ, ಅಸಾಧಾರಣ ಮತ್ತು ಸಂಭಾವಿತ ಮನುಷ್ಯ, ಅವರ ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು. ಅವರಿಗೆ ಎಂದಿಗೂ ಹಣ ಮುಖ್ಯವಾಗಿರಲಿಲ್ಲ. ಅವರು ವಿದೇಶದಲ್ಲಿ ಇದ್ದಷ್ಟು ನಿರಾಳರಾಗಿ ಭಾರತದಲ್ಲಿ ಇರಲಿಲ್ಲ’ ಎಂದಿದ್ದರು ಸಿಮಿ.

ರತನ್ ಟಾಟಾ ಮತ್ತು ಸಿಮಿ ಗರೆವಾಲ್ ಡೇಟಿಂಗ್​ನಲ್ಲಿ ಇದ್ದರು. ಇವರ ಪ್ರೀತಿ ಮದುವೆಯ ಹಂತಕ್ಕೆ ಹೋಗಲಿಲ್ಲ. ಇಬ್ಬರೂ ಬೇರೆಯವರನ್ನು ಮದುವೆಯಾದರು. ನಂತರ ತುಂಬಾ ವರ್ಷ ನಿಕಟ ಸ್ನೇಹಿತರಾಗಿಯೇ ಇದ್ದರು.

ರತನ್ ಟಾಟಾ ಸಾವಿಗೆ ಕಂಬನಿ ಮಿಡಿದಿರುವ ನಟಿ  ಸಿಮಿ ಗರೆವಾಲ್ ಅವರು ತಮ್ಮ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. 

‘ಎಲ್ಲರು ನೀವು ಹೋಗಿದ್ದೀರಿ ಎಂದು ಹೇಳುತ್ತಿದ್ದಾರೆ. ನಿಮ್ಮ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ತುಂಬಾ ಕಷ್ಟ. ವಿದಾಯ ನನ್ನ ಸ್ನೇಹಿತ’ ಎಂದು ಸಿಮಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link