ಪ್ರೀತಿ ಸಿಗಲಿಲ್ಲ, ಸೋಲು ಕುಗ್ಗಿಸಲಿಲ್ಲ... ದಂತಕಥೆ ʼರತನ್ ರತ್ನʼದಂತಹ ಈ ಮಾತುಗಳು ನಿಮ್ಮ ಜೀವನವನೇ ಬದಲಾಯಿಸುತ್ತವೆ..!
ರತನ್ ನೇವಲ್ ಟಾಟಾ ಅವರು ಡಿಸೆಂಬರ್ 28, 1937 ರಂದು ಭಾರತದ ಮುಂಬೈನಲ್ಲಿ ಜನಿಸಿದರು. 86ನೇ ವಯಸ್ಸಿನಲ್ಲಿ ಅಂದ್ರೆ ಅಕ್ಟೋಬರ್ 9 2024 ರಂದು ನಿಧನರಾದರು. ಭಾರತದ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಜನಸೇವಕ.. 1991 ರಿಂದ 2012 ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದರು..
ರತನ್ ಟಾಟಾ ಮುಂದಿನ ಪೀಳಿಗೆಗೆ ಸ್ಫೂರ್ತಿಯ ದಾರಿದೀಪವಾಗಿ ನಿಂತಿದ್ದಾರೆ. ಭಾರತೀಯ ಕೈಗಾರಿಕೋದ್ಯಮಿ, ಸಮಾಜಸೇವೆ.. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿದ್ದ ರತನ್ ಅವರು ಬಹುತೇಕ ಎಲ್ಲಾ ವರ್ಗದ ಜನರಿಗೆ ಸ್ಫೂರ್ತಿ ಅಂದ್ರೆ ತಪ್ಪಾಗಲಾರದು.. ಹೊಸದಾಗಿ ಉದ್ಯಮ, ಜೀವನದಲ್ಲಿ ಸೋಲು, ಪ್ರೀತಿ ಕಳೆದುಕೊಂಡ ಯುವಕರಿಗೆ ಅವರ ಮಾತುಗಳು ಅಕ್ಷರಶಃ ಶಕ್ತಿದಾಯಕ..
"ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಅದರ ನಾಶಕ್ಕೆ ಕಾರಣವಾಗುತ್ತೆ..! ಹಾಗೆಯೇ, ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವನ ಸ್ವಂತ ಮನಸ್ಥಿತಿ ಅವನನ್ನೇ ನಾಶ ಮಾಡಬಹುದು."
"ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ಸ್ವೀಕರಿಸಿ.. ಅವುಗಳನ್ನ ಸ್ಮಾರಕ ನಿರ್ಮಿಸಲು ಅವುಗಳನ್ನು ಬಳಸಿ."
"ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ಮೊದಲು ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ.. ನಂತರ ಅವುಗಳನ್ನು ಸರಿಪಡಿಸುತ್ತೇನೆ.."
"ನಾನು ಮಾಡಿದ ಬಲವಾದ ಕೆಲಸವೆಂದರೆ ನನ್ನ ಭಾವನೆಗಳನ್ನು ಜಗತ್ತಿಗೆ ತೋರಿಸುವುದು."
"ಕೊನೆಯಲ್ಲಿ, ನಾವು ಉಪಯೋಗಿಸಿಕೊಳ್ಳದ ಅವಕಾಶಗಳಿಗೆ ಮಾತ್ರ ವಿಷಾದಿಸುತ್ತೇವೆ."
"ಜೀವನದಲ್ಲಿ ಜರುಗುವ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ.. ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದರ್ಥ."
"ಭವಿಷ್ಯ ಏನೆಂದು ನನಗೆ ತಿಳಿದಿಲ್ಲ, ಆದರೆ ನಾನು ಸದಾ ಪಾಸಿಟಿವ್ ಆಗಿ ಯೋಚಿಸಲು ಬಯಸುತ್ತೆನೆ.. "
"ನೀವು ವೇಗವಾಗಿ ನಡೆಯಲು ಬಯಸಿದರೆ, ಒಬ್ಬಂಟಿಯಾಗಿ ನಡೆಯಿರಿ, ಆದರೆ ವಾಕಿಂಗ್ ಮಾಡಲು ಬಯಸಿದರೆ, ಒಟ್ಟಿಗೆ ನಡೆಯಿರಿ."
"ಗೆಲುವಿನ ಏಕೈಕ ಮಾರ್ಗ ಸೋಲಿಗೆ ಹೆದರದಿರುವುದು."