ಸರಳತೆಯ ಸರದಾರ.. ಭಾರತದ ಅತ್ಯಂತ ಗೌರವಯುತ ಉದ್ಯಮಿ ರತನ್ ಟಾಟಾ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತಾ..?
Ratan tata networth: ಗೌರವಾನ್ವಿತ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ನೇವಲ್ ಟಾಟಾ ಅವರು ಗುರುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹಸು ನೀಗಿದ್ದಾರೆ. ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿದ್ದ ಸರದಾರ ತಮ್ಮ 86 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.
ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರಗೆ ಹೋಗಿದ್ದ ರತನ್ ಟಾಟಾ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ರತನ್ ಟಾಟಾ ಅವರು ಬುಧವಾರ ತಡ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಸಮಾನ್ಯವಾದ ಆರೋಗ್ಯ ತಪಾಣೆಗೆಂದು ರತನ್ ಟಾಟಾ ಅವರು ಆಸ್ಪತ್ರೆಗೆ ದಾಕಲಾಗಿದ್ದರು, ಅವರ ಆರೋಗ್ಯದ ಸ್ಥಿತಿಯ ಕುರಿತು ಆತಂಕ ಪಡಬೇಕಾಗಿಲ್ಲ ಎಂದು ಅವರ ಆಪ್ತ ವಲಯಗಳು ಮಾಹಿತಿ ನೀಡಿದ್ದವಾದರೂ, ರತನ್ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ರತನ್ ಟಾಟಾ ಅತೀ ಚಿಕ್ಕ ವಯಸ್ಸಿನಲ್ಲಿ ಇಂಡಸ್ಟ್ರಿ ಬ್ಯುಸಿನೆಸ್‌ಗೆ ಕಾಲಿಡುವ ಮೂಲಕ ಒಂದ ಸಾಮ್ರಾಜ್ಯವನ್ನೆ ನಿರ್ಮಿಸಿ ಬಿಟ್ಟಿದ್ದಾರೆ, ಹಲವು ವರ್ಷಗಳ ಈ ಪಯಣದಲ್ಲಿ ರತನ್ ಟಾಟಾ ಅವರು ಅಗಾದವಾದ ಸಂಪತ್ತನ್ನು ಸಂಪಾದಿಸಿ ಇಟ್ಟದ್ದಾರೆ.
ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಗಳಲ್ಲಿ ಪ್ರಮುಖ ಬ್ಯೂಸಿನೆ್‌ಮ್ಯಾನ್ ಆಗಿದ್ದರು ಸಹ, ಬಿಲಿಯನೇರ್ ಬ್ರಾಕೆಟ್‌ನಲ್ಲಿರುವ ಸಮಕಾಲೀನರಿಗೆ ಹೋಲಿಸಿದರೆ ಟಾಟಾ ಅವರ ವೈಯಕ್ತಿಕ ಸಂಪತ್ತು ತುಲನಾತ್ಮಕವಾಗಿ ಸಾಧಾರಣವಾಗಿದೆ. 2022 ರ IIFL ವೆಲ್ತ್ ಹುರುನ್ ಇಂಡಿಯಾ ಶ್ರೀಮಂತ ಪಟ್ಟಿಯ ಪ್ರಕಾರ, ರತನ್ ಟಾಟಾ ಅವರ ನಿವ್ವಳ ಮೌಲ್ಯವು ಸುಮಾರು ₹ 3,800 ಕೋಟಿ ಎಂದು ಅಂದಾಜಿಸಲಾಗಿದೆ.
₹3,500 ಕೋಟಿಗಳ ನಿವ್ವಳ ಮೌಲ್ಯದೊಂದಿಗೆ ರತನ್ ಟಾಟಾ ಅವರು, 421ನೇ ಸ್ಥಾನದಲ್ಲಿದ್ದಾರೆ. ಎಷ್ಟೆ ಸಾಮ್ರಾಜ್ಯದ ಒಡೆಯನಾಗಿದ್ದರು ಸಹ ರತನ್ ಟಾಟಾ ಅವರು ಯಾಕೆ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ ಎನ್ನುವ ಅನುಮಾನ ನಿಮಗೂ ಇರಬಹುದು ಅದಕ್ಕೆ ಕಾರನ ಇದೆ.
ಟಾಟಾ ಸನ್ಸ್‌ನಲ್ಲಿ ಮಹತ್ವದ ಪಾಲನ್ನು ಹೊಂದಿರುವ ಟಾಟಾ ಟ್ರಸ್ಟ್‌ಗಳು ತಮ್ಮ ಗಳಿಕೆಯ 66% ರಷ್ಟು ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ದತ್ತಿ ಕಾರ್ಯಗಳಿಗೆ ಕೊಡುಗೆ ನೀಡುತ್ತವೆ.