ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?

Thu, 10 Oct 2024-8:35 am,

Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್‌ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸೋಮವಾರದಂದು ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ದಾಕಲಾಗಿದ್ದ ಅವರನ್ನು, ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆಗೆ ಫಲಿಸದೆ ರತನ್‌ ಟಾಟಾ ಅವರು ಬುದವಾರ ತಡರಾತ್ರಿ ಹಸು ನೀಗಿದ್ದಾರೆ.  

ಸರಳತೆಯ ಸರದಾರ ಎನಿಸಿಕೊಂಡಿರುವ ರತನ್‌ ಟಾಟಾ ಅವರು ತಮ್ಮ ಹೆಸರಿಗೆ ತಕ್ಕಂತೆ ಗುಣ ಉಳ್ಳವರು ಅವರು ಎಷ್ಟು ಸಿಂಪಲ್‌ ಎಂದರೆ, ಒಬ್ಬ ಸಾಮಾನ್ಯ ಯುವಕನ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು, ಅಷ್ಟಕ್ಕೂ ರತನ್‌ ಟಾಟಾ ವಿಶೇಷ ಸ್ನೇಹ ಬೆಳೆಸಿಕೊಂಡಿದ್ದು ಒಬ್ಬ ವಿಶೇಷ ವ್ಯಕ್ತಿಯ ಜೊತೆ, ಟಾಟಾ ಅವರಿಗೂ ಅವರ ಸ್ನೇಹಿತನಿಗೂ ಇದ್ದದ್ದು, ಬರೋಬ್ಬರಿ 55 ವರ್ಷದ ವಯಸ್ಸಿನ ಅಂತರ.   

ಅಷ್ಟಕ್ಕೂ ರತನ್‌ ಟಾಟಾ ಸ್ನೇಹ ಬೆಳೆಸಿದ ಆ ವ್ಯಕ್ತಿಯ ಹೆಸರು, ಶಾಂತನು ನಾಯ್ಡು ಇವರು 1993 ರಲ್ಲಿ ಪುಣೆಯ ತೆಲುಗು ಕುಟುಂಬದಲ್ಲಿ ಜನಿಸಿದರು. ಇವರಿಗೆ ಪ್ರಾಣಿಗಳೆಂದರೆ ಬಹು ಪ್ರೀತಿ, ಸಮಾಜ ಸೇವೆ ಮಾಡುತ್ತಾ ಬಂದಿರುವ ಈ ಯುವಕ ತಮ್ಮ 31 ನೇ ವಯಸ್ಸಿಗೆ, ಉದ್ಯಮದಲ್ಲಿ ಒಳ್ಳೆ ಹೆಸರು ಗಳಿಸಿದ್ದಾರೆ.   

ರತನ್‌ ಟಾಟಾ ಹಾಗೂ ಶಾಂತನೂ ನಾಯ್ಡು ಅವರಿಗೆ ಇದ್ದದ್ದು ಸಾಮಾನ್ಯ ಸ್ನೇಹ ಅಲ್ಲ, ಅದು ತುಂಬಾ ಗಾಢವಾದದ್ದು, ಅಷ್ಟಕ್ಕೂ ರತನ್‌ ಟಾಟಾ ಅವರಿಗೂ ಈ ಯುವಕನಿಗೂ ಗಾಢವಾದ ಸ್ನೇಹ ಉಂಟಾಗಲು ಹಿಂದಿನ ಒಂದು ಕಾರಣ ಇದೆ.   

ಮೋಟೋಪಾಸ್ ಸಂಸ್ಥೆಯನ್ನು ರಚಿಸಿರುವ ಶಾಂತನೂ, ಬೀದಿಯಲ್ಲಿ ತಿರುಗಾಡುವ ನಾಯಿಗಳಿಗಾಗಿ ಡೆನಿಮ್‌ ಕಾಲರ್‌ಗಳನ್ನು ರಚಿಸಿದ್ದರು, ಇದು ರಾತ್ರಿಯ ವೇಳೆ ಕಾಣಿಸದೆ ರಸ್ತೆಯಲ್ಲಿ ವಾಹನಗಳಿಗೆ ಸಿಲುಕು ಸಾಯುತ್ತಿದ್ದ ನಾಯಿಗಳನ್ನು ರಕ್ಷಿಸಲು ಮಾಡಿದ್ದ ಒಂದು ಕಾರ್ಯವಾಗಿತ್ತು. ಯುವ ಯುವಕ ಮಾಡಿದ್ದ ಈ ಯೋಚನೆ ಪ್ರಾಣಿ ಪ್ರಿಯರಾಗಿದ್ದ ರತನ್‌ ಟಾಟಾ ಅವರ ಮನಸ್ಸನ್ನು ಗೆದ್ದತ್ತು.   

ಶಾಂತನು ಮಾಡಿದ್ದ ಈ ಕಾರ್ಯವನ್ನು ಗುರುತಿಸಿದ್ದ ರತನ್‌ ಟಾಟಾ ಅವರು ಶಾಂತನು ಅವರನ್ನು ಮುಂಬೈಗೆ ಕರೆಸಿಕೊಂಡಿದ್ದರು. ಇಬ್ಬರ ನಡುವಿನ ಚಿಂತನೆಗಳು ಒಂದೆ ರೀತಿ ಇದ್ದವು, ಇಬ್ಬರ ಪರಿಚಯ ಆತ್ಮೀಯ ಸ್ನೇಹಕ್ಕೆ ತಿರುಗಿತ್ತು. ಅಲ್ಲಿಂದ ಇವರಿಬ್ಬರ ಸ್ನೇಹ ಗಾಢವಾಗಿತ್ತು.   

ಹೀಗೆ ವಿಶೇಷ ಚಿಂತನೆಯನ್ನು ಹೊಂದಿದ್ದ ಶಾಂತನು ಅವರಿಗೆ ರತನ್‌ ಟಾಟಾ ಅವರು ಶಾಂತನು ಅವರಿಗೆ ಜನರಲ್ ಮ್ಯಾನೇಜರ್ ಆಗಿ ಕೆಲಸ ಕೊಟ್ಟಿದ್ದರು, ಇಷ್ಟೆ ಅಲ್ಲದೆ ಶಾಂತನು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಟಾಟಾ ಗ್ರೂಪ್‌ಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link