ರತನ್ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್ ಆಯ್ತು ಅವರ ಟ್ವಿಟರ್ ಪೇಜ್‌ನ ಕೊನೆ ಪೋಸ್ಟ್
Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.
ರತನ್ ಟಾಟಾ ಅವರ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿತ್ತು. ಸುದ್ದಿಯನ್ನು ಕೇಲುತ್ತಿದ್ದಂತೆ ಹಲವು ಗಾಬರಿಯಾಗಿದ್ದರು, ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರತನ್ ಟಾಟಾ ಅವರು, ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಅನುಯಾಯಿಗಲಿಗೆ ಧನ್ಯವಾದಗಳನ್ನು ಹೇಳಿದ್ದರು.
ರತನ್ ಟಾಟಾ ಅವರು ತಮ್ಮ ಕೊನೆಯ ಪೋಸ್ಟ್ ಅನ್ನು ಅಕ್ಟೋಬರ್ 08 ರಂದು ಹಂಚಿಕೊಂಡಿದ್ದರು, ಇದರಲ್ಲಿ ಅವರು ತಮ್ಮ ಆರೋಗ್ಯ ಸತಿತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ತಮ್ಮ ಆರೋಗ್ಯ ಸುಧಾರಿಸುವುದಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಸಿದ್ದರು.
ಇದೀಗ ತಮ್ಮ ಆರೋಗ್ಯ ಕುರಿತು ಕೊನೆಯ ಪೋಸ್ಟ್ ಮಾಡಿದ್ದ ರತನ್ ಟಾಟಾ ಅವರು ಬುಧವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ, ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೂ, ರತನ್ ಟಾಟಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದ್ದು, ಅವರ ಅನುಯಾಯಿಗಳು, ರತನ್ ಟಾಟಾ ಅವರಿಗೆ ತಮ್ಮ ಸಾವಿನ ಸುಳಿವು ಮೊದಲೇ ಸಿಕ್ಕಂತಿದೆ ಎಂಬ ಅನುಮಾವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಅಷ್ಟಕ್ಕೂ ವೈರಲ್ ಆಗುತ್ತಿರುವ ಈ ಪೋಸ್ಟ್‌ನಲ್ಲಿ ರತನ್ ಟಾಟಾ ಅವರು, "ನನ್ನ ಆರೋಗ್ಯ ಪರಿಸ್ಥಿತಿಯ ಕುರಿತು ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ, ನನಗೆ ನೀವು ಗಾಬರಿ ಪಡುವಂತಹದ್ದೇನು ಆಗಿಲ್ಲ, ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ನೀವು ಇದರ ಕುರಿತು ಚಿಂತಿಸುವ ಅಗತ್ಯವಿಲ್ಲ. ಸಾರ್ವಜನಿಕರೇ ಆಗಲಿ ಮಾಧ್ಯಮದವರೇ ಆಗಲಿ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ" ಎಂದು ಬರೆದುಕೊಂಡಿದ್ದರು.