Rasha Thadani: ರವೀನಾ ಟಂಡನ್ ಪುತ್ರಿ ಇವರೇ ನೋಡಿ... ಅಮ್ಮನನ್ನೂ ಮೀರಿಸುವ ಸುಂದರಿ.!
ರಾಶಾ ತಡಾನಿ ತಮ್ಮ 19 ನೇ ಹುಟ್ಟುಹಬ್ಬದ ಸಂಭದಲ್ಲಿದ್ದಾರೆ. ರವೀನಾ ತಮ್ಮ ಮಗಳಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ರವೀನಾ ಟಂಡನ್ ಮಗಳು ರಾಶಾ ಹುಟ್ಟುಹಬ್ಬದಂದು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ರವೀನಾ ಟಂಡನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಗಳ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿ, ವಿಶ್ ಮಾಡಿದ್ದಾರೆ.
ರವೀನಾ ಅವರ ಈ ಸುಂದರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರಾಶಾ, 'ಲವ್ ಯೂ ಮಾಮ್...' ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದೆ.
ರಾಶಾ ಸೌತ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗ್ತಿದೆ.
ರಾಶಾ ತನ್ನ ಮೊದಲ ಚಿತ್ರವನ್ನು ಸೌತ್ ಸ್ಟಾರ್ ರಾಮ್ ಚರಣ್ ಅವರೊಂದಿಗೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇದು ತೆಲುಗು ಚಿತ್ರವಾಗಿದ್ದು, ಇದನ್ನು ಬುಚ್ಚಿ ಬಾಬು ನಿರ್ದೇಶಿಸಲಿದ್ದಾರೆ. ಆದರೆ, ಚಿತ್ರ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.