ಹದಿನಾಲ್ಕು ದಿನಗಳ ಬಳಿಕ ಧನು ರಾಶಿಗೆ ಸೂರ್ಯ ಪ್ರವೇಶ, ಈ ಜನರಿಗೆ ಭಾರಿ ಧನಲಾಭ-ಪದೋನ್ನತಿ ಭಾಗ್ಯ ಪ್ರಾಪ್ತಿ ಯೋಗ!
Ravi Gochara 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನು ರಾಶಿಗೆ ಸೂರ್ಯನ ಪ್ರವೇಶ ನೆರವೇರಲಿದ್ದು, ಇದು ಕೆಲ ರಾಶಿಗಳ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಬಾವವನ್ನು ಬೀರಲಿದೆ. ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಹಾಗೂ ಧನಲಾಭ ಯೋಗ ಕರುಣಿಸಲಿದೆ. (Spiritual News In Kannada)
ಮೇಷ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸೂರ್ಯ ಗೋಚರಿಸಲಿದ್ದಾನೆ. ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಸುಕಾಲ ಬರಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಯಾವುದಾದರೊಂದು ಧಾರ್ಮಿಕ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಪ್ರತಿಯೊಂದು ರಂಗದಲ್ಲಿ ನೀವು ಯಶಸ್ಸನ್ನು ಕಾಣುವಿರಿ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಈ ಕಾಲ ಉತ್ತಮವಾಗಿದೆ. ವಿವಾಹಿತರಿಗೆ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದ್ದು, ನಿಶ್ಚಿತಾರ್ಥದ ಎಲ್ಲಾ ಸಂಕೇತಗಳು ಗೋಚರಿಸುತ್ತಿವೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಹಾಗೂ ಆತ್ಮವಿಶ್ವಾಸದಲ್ಲಿ ಹೆಚ್ಚಳವನ್ನು ನೀವು ಕಾಣುವಿರಿ. ಇದರಿಂದ ನೀವು ಕಾರ್ಯ ಕ್ಷೇತ್ರ ಹಾಗೂ ಬಿಸ್ನೆಸ್ ನಲ್ಲಿ ಅಪಾರ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಸಹೋದರ ಸಹೋದರಿಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.
ತುಲಾ ರಾಶಿ: ಸೂರ್ಯನ ಈ ಧನು ಗೋಚರ ನಿಮ್ಮ ಜಾತಕದ ತೃತೀಯ ಭಾವದಲ್ಲಿ ನೆರವೇರುತ್ತಿದೆ. ಇದರಿಂದ ಈ ರಾಶಿಯ ಜಾತಕದವರಿಗೆ ಲಾಭವೋ ಲಾಭ ಸಿಗಲಿದೆ. ಮಾತಿನ ಕೌಶಲ್ಯದಿಂದ ನೀವು ಎಲ್ಲರ ಮನಸ್ಸನ್ನು ಗೆಲ್ಲುವಿರಿ. ವೃತ್ತಿಪರ ಜೀವನದಲ್ಲಿ ಉನ್ನತಿಯ ಎಲ್ಲಾ ಸಂಕೇತಗಳಿವೆ. ನಿಮ್ಮ ಸದಭಿರುಚಿಯ ಮೇಲೆ ಕೆಲಸ ಮಾಡುವುದರಿಂದ ಪ್ರಸನ್ನರಾಗುವಿರಿ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಧನಲಾಭ ಉಂಟಾಗಲಿದ್ದು, ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಪ್ರಾಜೆಕ್ಟ್ ಹಿನ್ನೆಲೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ತಂದೆ-ತಾಯಿಯರ ಬೆಂಬಲ ಸಿಗಲಿದೆ. ಜೀವನದಲ್ಲಿ ಏನಾದರೂ ಒಳ್ಳೆಯದನ್ನು ಮಾಡಲು ಹೆಜ್ಜೆ ಮುಂದಕ್ಕೆ ಇಡುವಿರಿ.
ಧನು ರಾಶಿ: ನಿಮ್ಮ ಗೋಚರ ಜಾತಕದ ಪ್ರಥಮ ಭಾವದಲ್ಲಿ ಸೂರ್ಯನ ಈ ಗೋಚರ ಸಂಭವಿಸುತ್ತಿದೆ. ಹೀಗಾಗಿ ನಿಮಗೆ ಭಾಗ್ಯ-ಸೌಭಾಗ್ಯದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಕುಟುಂಬಸ್ಥರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಸರ್ಕಾರಕ್ಕೆ ಸಂಬಂಧಿಸಿದ ಜನರಿಗೆ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ನಿರ್ಣಯ ಹಾಗೂ ನೇತೃತ್ವವನ್ನು ವಹಿಸುವ ನಿಮ್ಮ ಸಾಮರ್ಥ್ಯದಿಂದ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗುವಿರಿ. ಸರ್ಕಾರಿ ನೌಕರಿಗೆ ಸಿದ್ಧತೆ ನಡೆಸುವ ಜನರಿಗೆ ಯಶಸ್ಸು ಸಿಗಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಇದಲ್ಲದೆ ನಿಮ್ಮ ಕೆಲಸವನ್ನು ನೋಡಿ ಹಿರಿಯ ಅಧಿಕಾರಿಗಳು ನಿಮಗೆ ಪದೋನ್ನತಿ ನೀವುಯ ಸಾಧ್ಯತೆ ಇದ್ದು, ದೊಡ್ಡ ಜವಾಬ್ದಾರಿ ನಿಮ್ಮ ಹೆಗಲಿಗೇರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)