ಜನವರಿ 2024 ರಲ್ಲಿ ಸೂರ್ಯ ಮಂಗಳರ ರವಿ-ಮಂಗಳ ರಾಜಯೋಗ ರಚನೆ, ಈ ರಾಶಿಗಳ ಜನರ ಜೀವನದಲ್ಲಿ ಹಣವೋ-ಹಣ ಹರಿದುಬರಲಿದೆ!

Sun, 31 Dec 2023-6:55 pm,

Ravi Mangal Rajyog 2024: ವೈದಿಕ ಜೋತಿಷ್ಯ ಸಾಃಸ್ತ್ರದ ಪ್ರಕಾರ ವರ್ಷಾಂತ್ಯಕ್ಕೆ ಧನು ರಾಶಿಯಲ್ಲಿ ಸೂರ್ಯ ಹಾಗೂ ಮಂಗಳರು ರವಿ ಮಂಗಳ ಯೋಗ ರಚಿಸಲಿದ್ದಾರೆ, ಇದರಿಂದ ಜನವರಿ 2024 ರಲ್ಲಿ ಕೆಲ ರಾಶಿಗಳ ಜನರ ಜೀವನದಲ್ಲಿ ಹಣವೋ ಹಣ ಹರಿದುಬರಲಿದ್ದು, ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. 

ಮೇಷ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಈ ರವಿ ಮಂಗಳ ಯೋಗ ರಚನೆಯಾಗಲಿದೆ. ಇದರಿಂದ ನಿಮಗೆ ಅದೃಷ್ಟದ ಬೆಂಬಲ ಸಿಗಲಿದೆ. ಅತ್ಯಾವಶ್ಯಕ ಕೆಲಸಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಹಾಗೂ ಮಃಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನೀವು ಅಂದುಕೊಂಡಂತೆ ನಿಮ್ಮ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿವೆ. ನೋಮ್ಮೊಳಗೆ ಒಂದು ಸಕಾರಾತ್ಮಕ ಶಕ್ತಿಯ ಸಾಚಾರ ಉಂಟಾಗಲಿದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳ ನಿಮಿತ್ತ ನಿಮ್ಮ ಯಾತ್ರೆ ಜರುಗುವ ಸಾಧ್ಯತೆ ಇದೆ. ನಿವೇಶನ ಅಥವಾ ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. 

ಮೀನ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಈ ರವಿ ಮಂಗಳ ಯೋಗ ರಚನೆಯಾಗಲಿದೆ. ಇದರಿಂದ ಹೊಸ ವರ್ಷದ ಆರಂಭದಲ್ಲಿಯೇ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಉಂಟಾಗಲಿದೆ. ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ಲವ್ ಲೈಫ್ ನಲ್ಲಿ ಸಂಗಾತಿಯ ಎಂಟ್ರಿಯಾಗಲಿದೆ. ಹಲವು ಮೂಲಗಳಿಂದ ಹಣ ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಷೇರುಪೇಟೆ-ಲಾಟರಿಗಳಂತಹ ವ್ಯವಹಾರಗಳಿಂದ ನಿಮಗೆ ಧನಲಾಭ ವಾಗಲಿದೆ. ಹಣ ಹೂಡಿಕೆಗೆ ಕಾಲ ಉತ್ತಮವಾಗಿದೆ. ಏಕೆಂದರೆ ಲಾಭದ ಯೋಗಗಳು ರೂಪುಗೊಳ್ಳುತ್ತಿವೆ. 

ಕನ್ಯಾ ರಾಶಿ: ರವಿ ಮಂಗಳ ಯೋಗ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ ಪ್ರಾಪರ್ಟಿ ಸುಖ ಪ್ರಾಪ್ತಿಯಾಗಲಿದೆ. ಒಂದು ವೇಳೆ ನಿಮ್ಮ ಕೆಲಸ ಅಥವಾ ವ್ಯಾಪಾರ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ್ದರೇ, ಅಥವಾ ನಿವೇಶನ, ಹೊಟೇಲ್ ಅಥವಾ ಮೆಡಿಕಲ್ ಉದ್ಯಮಕ್ಕೆ ಸಂಬಂಧಿಸಿದ್ದರೇ, ಈ ಸಮಯ ನಿಮ್ಮ ಪಾಲಿಗೆ ಅತ್ಯುತ್ತಮ ಸಾಬೀತಾಗಲಿದೆ. ಒಂದು ವೇಳೆ ನೌಕರಿ ಬದಲಾವಣೆಯ ಕುರಿತು ಯೋಚಿಸುತ್ತಿದ್ದರೆ, ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಉತ್ತಮ ಧನಲಾಭ ಕಾದಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link