`ಅವಳ ಮಾತು ನನ್ನ ಮೌನವಾಗಿಸಿತ್ತು..ಅವಳ ಅಂದ ನನ್ನ ಮೈ ಮರೆಸಿತ್ತು` ಮಾಜಿ ಗೆಳತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ರವಿಶಾಸ್ತ್ರಿ..!

Sat, 10 Aug 2024-11:02 am,

ಬಾಲಿವುಡ್‌ ನಟಿ ಅಮೃತಾ ಸಿಂಗ್‌ ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದವರು. ತಮ್ಮ ಸೌಂದರ್ಯದಿಂದ ನಟಿ ಅನೇಕ ಹುಡುಗರನ್ನು ಹುಚ್ಚೆಬ್ಬಿಸಿದ್ರು. ಅವರಿಗಿಂತ 13 ವರ್ಷ ಚಿಕ್ಕವರಾಗಿದ್ದ ಸೈಫ್‌ ಅಲಿಖಾನ್‌ ಕೂಡ ಒಂದಾನೊಂದು ಕಾಲದಲ್ಲಿ ನಟಿಯ ಬ್ಯೂಟಿಗೆ ಮನಸೋತು ಅವರನ್ನು ಮದುವೆಯಾಗಿದ್ದರು.

ನಟ ಸೈಫ್‌ ಅಲಿ ಖಾನ್‌ ಅವರನ್ನು ಮದುವೆಯಾಗುವುದಕ್ಕೂ ಮುಂಚೆ ನಟಿ ಅಮೃತಾ ಸಿಂಗ್‌ ಭಾರತ ತಂಡದ ದಿಗ್ಗಜ ಆಟಗಾರ ರವಿಶಾಸ್ತ್ರಿಯವರನ್ನು ಪ್ರೀತಿಸುತ್ತಿದ್ದರು. ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸಬಾರದು ಎಂದು ರವಿ ಶಾಸ್ತ್ರಿ ಷರತ್ತಾಕಿದ ಕಾರಣ ಇಬ್ಬರು ತಮ್ಮ ಸಂಬಂಧಕ್ಕೆ ಅಂತ್ಯಾ ಹಾಡಿ ತಮ್ಮ ದಾರಿಯನ್ನು ತಾವು ಆಯ್ದುಕೊಂಡಿದ್ದರು.  

ಇಬ್ಬರ ಬ್ರೇಕ್‌ ಅಪ್‌ ಆಗಿ ಹಲವು ವರ್ಷಗಳು ಕಳೆದಿವೆ ಇಬ್ಬರೂ ಕೂಡ ಬೇರೆ ಬೇರೆ ದಾರಿಯೊಂದಿಗೆ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಸೈಫ್‌ ಅಲಿ ಖಾನ್‌ ಅವರೊಂದಿಗೆ ಮದುವೆಯಾದ ನಂತರ ಅಮೃತಾ ಸಿಂಗ್‌ ಕೆಲವೇ ವರ್ಷಗಳಲ್ಲಿ ಡಿವೋರ್ಸ್‌ ಪಡೆದುಕೊಂಡು ಪ್ರತ್ಯೇಕವಾಗಿ ವಾಸಿಸಲು ಶುರು ಮಾಡಿದ್ದಾರೆ. ಇನ್ನೂ ರವಿಶಾಸ್ತ್ರಿ ಕೂಡ ಪತ್ನಿಯಿಂದ ವಿಚ್ಚೇಧನ ಪಡೆದು ದೂರವಾಗಿದ್ದಾರೆ. ಆದರೆ ರವಿಶಾಸ್ತ್ರಿ ಅವರ ಸಂದರ್ಶನದ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರವಿಶಾಸ್ತ್ರಿ ಅಮೃತಾ ಸಿಂಗ್‌ ಅವರ ಮೊದಲ ಭೇಟಿಯ ದಿನವನ್ನು ಹಾಗು ಆ ಗಳಿಗೆಯನ್ನು ಮೆಲುಕು ಹಾಕಿದ್ದಾರೆ. ಮೊದಲ ಭಾರಿಗೆ ರವಿಶಾಸ್ತ್ರಿ ಅಮೃತಾ ಸಿಂಗ್‌ ಅವರನ್ನು ಮುಂಬೈನ ರೆಸ್ಟೋರಂಟ್‌ನಲ್ಲಿ ಭೇಟಿಯಾಗಿದ್ದರಂತೆ. ಹೆಚ್ಚು ನಾಚಿಕೆ ಸ್ವಾಭಾವದವರಾಗಿದ್ದ ರವಿಶಾಸ್ತ್ರಿ ನಟಿಯನ್ನು ನೋಇ ನಾಚಿ ನೀರಾಗಿದ್ದರಂತೆ.

ಮಾಧ್ಯಮ ವರದಿಗಳ ಪ್ರಕಾರ, ಅಮೃತಾ ಸಿಂಗ್ ಮತ್ತು ರವಿಶಾಸ್ತ್ರಿ ಮೊದಲು ಸ್ನೇಹಿತರಾದರು ಮತ್ತು ನಂತರ ಈ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರೂ ಸಿನಿಮಾ ಮ್ಯಾಗಜಿನ್‌ಗೆ ಕವರ್ ಶೂಟ್ ಕೂಡ ಮಾಡಿದ್ದು, ಇದರೊಂದಿಗೆ ಅವರ ಲವ್ ಸ್ಟೋರಿ ಕೂಡ ಜನರ ಮುಂದೆ ಬಂದಿತ್ತು. ಆದರೆ, ಇಬ್ಬರೂ ಮದುವೆಯಾಗುವ ಮುನ್ನವೇ ಪರಸ್ಪರ ದೂರವಾಗಿದ್ದರು.  

ವೃತ್ತಿ ಮತ್ತು ಮದುವೆಗೆ ಸಂಬಂಧಿಸಿದಂತೆ ಅಮೃತಾ ಸಿಂಗ್ ಮತ್ತು ರವಿಶಾಸ್ತ್ರಿ ಅವರ ಅಭಿಪ್ರಾಯಗಳು ವಿಭಿನ್ನವಾಗಿದ್ದವು. ರವಿಶಾಸ್ತ್ರಿ ಅವರು ತಮ್ಮ ಮನೆ, ಕುಟುಂಬ ಮತ್ತು ಮಕ್ಕಳಿಗಾಗಿ ತನ್ನನ್ನು ಅರ್ಪಿಸಿಕೊಳ್ಳುವ ಹೆಂಡತಿಯನ್ನು ಬಯಸಿದ್ದರು. ಆಗ ಅಮೃತಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಳು ಮತ್ತು ಈ ಮದುವೆಗೆ ಸಿದ್ಧಳಾಗಿರಲಿಲ್ಲ. ಮದುವೆಯ ನಂತರವೂ ತನ್ನ ವೃತ್ತಿಯನ್ನು ಮುಂದುವರಿಸಲು ಬಯಸಿದ್ದಳು ಇದೇ ಕಾರಣದಿಂದ ಇಬ್ಬರು ದೂರಾಗಬೇಕಾಗಿ ಬಂತು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link