ಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದು
ಸದ್ಯ ಟೀಂ ಇಂಡಿಯಾದ ಅತ್ಯಂತ ಮಾರಕ ಅಸ್ತ್ರ ಈ ಬೌಲರ್. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 593 ವಿಕೆಟ್ ಪಡೆದಿರುವ ಹೆಗ್ಗಳಿಕೆ ಇವರದ್ದು. ಈ ಮ್ಯಾಚ್ ವಿನ್ನಿಂಗ್ ಬೌಲರ್ ಇರುವಿಕೆಯಿಂದ ಟೀಂ ಇಂಡಿಯಾದ ಶಕ್ತಿ ದ್ವಿಗುಣಗೊಂಡಿದೆ.
ಈ ಕ್ರಿಕೆಟಿಗ ಪಂದ್ಯಗಳ ದಿಕ್ಕನ್ನು ಬದಲಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6,506 ರನ್ ಗಳಿಸಿದ್ದಾರೆ.ಈ ಭಾರತೀಯ ಕ್ರಿಕೆಟಿಗ ಫೀಲ್ಡಿಂಗ್ ಮೂಲಕ ರನ್ ಔಟ್ ಮಾಡುವಲ್ಲಿ ಕಷ್ಟಕರವಾದ ಕ್ಯಾಚ್‌ಗಳನ್ನು ಹಿಡಿಯುವುದರಲ್ಲಿ ನಿಷ್ಣಾತ.
ನಾವಿಲ್ಲಿ ಹೇಳುತ್ತಿರುವ ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ರವೀಂದ್ರ ಜಡೇಜಾ. ಇಂದು ರವೀಂದ್ರ ಜಡೇಜಾ ಅವರ 36ನೇ ಹುಟ್ಟುಹಬ್ಬ.
ಮಾರಕ ಎಡಗೈ ಸ್ಪಿನ್ ಬೌಲ್ ಮಾಡುವ ಪ್ರತಿಭೆ ರವೀಂದ್ರ ಜಡೇಜಾ. ಇದಲ್ಲದೆ, ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ ಬರುವ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್.
ರವೀಂದ್ರ ಜಡೇಜಾ ತುಂಬಾ ಅಪಾಯಕಾರಿ ಆಲ್ ರೌಂಡರ್. ರವೀಂದ್ರ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಗ್ರ ಸ್ಥಾನದಲ್ಲಿದ್ದಾರೆ. ತಂಡಕ್ಕೆ ಅಗತ್ಯ ಎನಿಸುವಾಗ ಬ್ಯಾಟ್ ಮೂಲಕ ರನ್ ಗಳ ಹೊಳೆ ಹರಿಸುತ್ತಾರೆ.
ರವೀಂದ್ರ ಜಡೇಜಾ ಭಾರತದ ಪರ ಪ್ರತಿ ಸಂಕಷ್ಟದ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯುವಲ್ಲಿ ಪರಿಣತರಾಗಿದ್ದಾರೆ.
ರವೀಂದ್ರ ಜಡೇಜಾ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್. ರವೀಂದ್ರ ಜಡೇಜಾ 77 ಟೆಸ್ಟ್ ಪಂದ್ಯಗಳಲ್ಲಿ 319 ವಿಕೆಟ್ ಪಡೆದಿದ್ದು, 3235 ರನ್ ಗಳಿಸಿದ್ದಾರೆ. 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್ ಮತ್ತು 74 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 54 ವಿಕೆಟ್ ಪಡೆದಿದ್ದಾರೆ. ರವೀಂದ್ರ ಜಡೇಜಾ ಏಕದಿನ ಪಂದ್ಯಗಳಲ್ಲಿ 2756 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 515 ರನ್ ಗಳಿಸಿದ್ದಾರೆ. 240 ಐಪಿಎಲ್ ಪಂದ್ಯಗಳಲ್ಲಿ ರವೀಂದ್ರ ಜಡೇಜಾ 160 ವಿಕೆಟ್ ಹಾಗೂ 2959 ರನ್ ಗಳಿಸಿದ್ದಾರೆ.