ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...
ಕಳಪೆ ಜೀವನಶೈಲಿ, ಒತ್ತಡ ಭರಿತ ಜೀವನದಿಂದಾಗಿ ಅತಿ ಚಿಕ್ಕ ವಯ್ಯಾಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ. ಕೂದಲು ಕಪ್ಪಾಗಿಸಲು ಹೇರ್ ಡೈ ಬಳಕೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಕೂದಲಿಗೆ ರಾಸಾಯನಿಕಗಳನ್ನು ಬಳಸುವುದರ ಬದಲಿಗೆ ತಾಮ್ರ, ಕಬ್ಬಿಣ ಸೇರಿದಂತೆ ಹಲವು ಔಷಧೀಯ ಗುಣಗಳನ್ನು ಹೊಂದಿರುವ ಮನೆಯಲ್ಲಿ ಸಿಗುವ ಹಸಿ ಅರಿಶಿನವನ್ನು ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಹಸಿ ಅರಿಶಿನವು ಒತ್ತಡದಿಂದ ಪರಿಹಾರ ನೀಡುತ್ತದೆ. ಜೊತೆಗೆ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ ಕೂದಲಿನಲ್ಲಿ ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸುತ್ತದೆ.
ಬಾಣಲೆಯನ್ನು ಕಾಯಿಸಿ ಒಂದು ಚಮಚ ಸಾಸಿವೆ ಎಣ್ಣೆಯನ್ನು ಹಾಕಿ, ಇದರಲ್ಲಿ ಎರಡು ಚಮಚದಷ್ಟು ತುರಿದ ಅರಿಶಿನವನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಬಳಿಕ ಅದನ್ನು ಬಟ್ಟಲಿಗೆ ಹಾಕಿ 1 ಸ್ಪೂನ್ ಕಾಫಿ ಪುಡಿ, 2 ವಿಟಮಿನ್ ಇ ಕ್ಯಾಪ್ಸುಲ್, ಅರ್ಧ ಓಳು ನಿಂಬೆ ರಸವನ್ನು ಬೆರೆಸಿ ಮಿಶ್ತ್ರನ ಮಾಡಿ.
ಮನೆಯಲ್ಲಿ ತಯಾರಿಸಿದ ನೈಸರ್ಗಿಕ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚು ಅರ್ಧಗಂಟೆ ಬಳಿಕ ಸೌಮ್ಯವಾದ ಶಾಂಪೂವಿನಿಂದ ಹೇರ್ ವಾಶ್ ಮಾಡಿ. ಬಿಳಿ ಕೂದಲು ಕಡು ಕಪ್ಪಾಗಿ ಪಳ ಪಳ ಹೊಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.