ಹಸಿ ಅರಿಶಿನದಿಂದ ನೈಸರ್ಗಿಕ ಹೇರ್ ಡೈ ತಯಾರಿಸಿ ಕೂಡಲೇ ಬಿಳಿ ಕೂದಲನ್ನು ಕಡು ಕಪ್ಪಾಗಿಸಿ!
)
ಹಸಿ ಅರಿಶಿನದ ಕೊನೆಯಲ್ಲಿ ತಾಮ್ರ, ಕಬ್ಬಿಣ ಸೇರಿದಂತೆ ಹಲವು ಔಷಧೀಯ ಗುಣಗಳು ಹೇರಳವಾಗಿದ್ದು ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ.
)
ಮೊದಲನೆಯದಾಗಿ ಸಣ್ಣ ಉರಿಯಲ್ಲಿ ಬಾಣಲೆ ಕಾಯಿಸಿ 1 ಸ್ಪೂನ್ ಸಾಸಿವೆ ಎಣ್ಣೆಗೆ 2 ಚಮಚ ತುರಿದ ಹಸಿ ಅರಿಶಿನವನ್ನು ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಕಾಫಿಪುಡಿ ನಿಂಬೆರಸ ಬೆರೆಸಿ ಮಿಕ್ಸ್ ಮಾಡಿ.
)
ಹಸಿ ಅರಿಶಿನದಿಂದ ತಯಾರಿಸಿದ ನೈಸರ್ಗಿಕ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ 15-20 ನಿಮಿಷಗಳ ಕಾಲ ಡ್ರೈ ಆಗಲು ಬಿಡಿ. ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ.
ಹಸಿ ಅರಿಶಿನದಿಂದ ತಯಾರಿಸಿದ ನೈಸರ್ಗಿಕ ಹೇರ್ ಡೈ ಹಚ್ಚುವುದರಿಂದ ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗುತ್ತೆ.
ಈ ಅರಿಶಿನದ ಹೇರ್ ಡೈ ಬಳಕೆಯಿಂದ ಕೂದಲಿಗೆ ನೈಸರ್ಗಿಕ ಬಣ್ಣ ದೊರೆತು ಕೂದಲು ಕಡು ಕಪ್ಪಾಗುತ್ತದೆ. ಜೊತೆಗೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.