WPL 2024: ಈ RCB ಸ್ಟಾರ್​​ ಆಟಗಾರ್ತಿ ಬಾಬರ್ ಅಜಮ್‌ಗಿಂತ ದುಪ್ಪಟ್ಟು ಸಂಭಾವನೆ ಪಡೀತಾರಂತೆ!

Sun, 25 Feb 2024-7:41 am,

ಐಪಿಎಲ್ ಮಾದರಿಯಲ್ಲಿಯೇ ಮಹಿಳಾ ಪ್ರೀಮಿಯರ್ ಲೀಗ್ ಕಳೆದ ವರ್ಷದಿಂದ ಪ್ರಾರಂಭವಾಗಿದೆ. ಈ ವರ್ಷ ಎರಡನೇ ಸೀಸನ್‌ ನಡೆಯಲಿದ್ದು, WPL 2024 ಫೆಬ್ರವರಿ 23ರಿಂದ ಶುರುವಾಗಿದೆ. 

ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಸೀಸನ್ ಆರಂಭವಾಗುವ ಮುನ್ನವೇ ಸ್ಮೃತಿ ಮಂಧಾನ ಕುರಿತ ವಿಚಾರವೊಂದು ಚರ್ಚೆಗೆ ಗ್ರಾಸವಾಗಿತ್ತು. ಭಾರತೀಯ ಮಹಿಳಾ ಕ್ರಿಕೆಟಿಗರು ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ವಿಚಾರ ಮುನ್ನೆಲೆಗೆ ಬಂದಿದೆ.

ಸ್ಮೃತಿ ಮಂಧಾನ‌ ಆರ್‌ಸಿಬಿ ತಂಡದ ಕ್ಯಾಪ್ಟನ್ ಆಗಿದ್ದಾರೆ. ಕಳೆದ ವರ್ಷ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 3.4 ಕೋಟಿ ರೂಪಾಯಿಗೆ ಸ್ಮೃತಿ ಮಂಧಾನ‌ ಅವರನ್ನು ಖರೀದಿಸಿತ್ತು. 

ಪಾಕಿಸ್ತಾನದ ಟಿ20 ಲೀಗ್​ PSL ನಲ್ಲಿ ಪಾಕ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಬಾಬರ್ ಅಜಮ್ ಗೆ ಕೊಟ್ಟ ಹಣಕ್ಕಿಂತ WPL ನಲ್ಲಿ ಸ್ಮೃತಿ ಮಂಧಾನ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಪಿಎಸ್ಎಲ್ ಡ್ರಾಫ್ಟ್ ವ್ಯವಸ್ಥೆಯನ್ನು ಹೊಂದಿದೆ. ಪ್ಲಾಟಿನಂ ವರ್ಗದಲ್ಲಿರುವವರು ಸುಮಾರು 1.40 ಕೋಟಿ ರೂ ಹಣ (ಭಾರತೀಯ ಕರೆನ್ಸಿಯಲ್ಲಿ) ಪಡೆಯುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link