ಒಡೆದು ಚೂರಾಯ್ತು ಕೋಟಿ ಕೋಟಿ ಅಭಿಮಾನಿಗಳ ಕನಸು..! ಆಸೆ ಹುಟ್ಟಿಸಿ ಕೆ.ಎಲ್‌.ರಾಹುಲ್‌ ಕೈ ಬಿಟ್ಟ RCB ಫ್ರಾಂಚೈಸಿ!! ಫ್ಯಾನ್ಸ್‌ ಫುಲ್‌ ಗರಂ

Mon, 25 Nov 2024-10:35 am,

KL Rahul: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್‌ನ 18 ನೇ ಆವೃತ್ತಿಯು ಬಹಳ ಅನಿರೀಕ್ಷಿ ತಿರುವುಗಳೊಂದಿಗೆ ಸಾಗುತ್ತಿದೆ. ಎರಡು ದಿನಗಳ ಮೆಗಾ ಹರಾಜು ಇದಾಗಿದ್ದು,  10 ಫ್ರಾಂಚೈಸಿಗಳು 577 ಆಟಗಾರರಲ್ಲ ಗೆಲ್ಲಲು ಮ್ಮ ತಂಡಕ್ಕೆ ಬೇಕಾದ ಎನರ್ಜಿಟಿಕ್‌ ಪ್ಲೇಯರ್‌ಗಳನ್ನು ಹಾರಿಸಿಕೊಳ್ಳುತ್ತಿದ್ದಾರೆ.  

ಸನ್‌ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಗುಜರಾತ್ ಟೈಟಾನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯಸ್ಥರು ಹರಾಜಿನಲ್ಲಿ ಭಾಗವಹಿಸಿದ್ದಾರೆ.  

ಈ ಹರಾಜಿನಲ್ಲಿ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭಾರಿ ದರಕ್ಕೆ ಸೋಲ್ಡ್ ಔಟ್ ಆಗಿದ್ದಾರೆ.  

ಐಪಿಎಲ್‌ 2025 ಹರಾಜಿನ ಮಾತುಕಥೆ ಶುರುವಾದಾಗಿನಿಂದ ಕೆಎಲ್‌ ರಾಹುಲ್‌ ಅವರು ಆರ್‌ಸಿಬಿ ತಂಡ ಸೇರಲಿದ್ದಾರೆ, ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಇದೀಗ ಅಭಿಮಾನಿಗಳ ಕನಸ್ಸಿಗೆ ಮಸಿ ಬಳಿದಂತಾಗಿದೆ.  

ಹೌದು, ಕೆಎಲ್‌ ರಾಹುಲ್‌ ಅವರು ಈ ಭಾರಿ ಐಪಿಎಲ್‌ ಹರಾಜಿಗೆ ಲಗ್ಗೆ ಇಟ್ಟಿದ್ದರು, ಆರ್‌ಸಿಬಿ ತಂಡ ರಾಹುಲ್‌ ಅವರನ್ನು ಖರೀದಿಸಲಿದ್ದಾರೆ ಎನ್ನುವ ನಿರೀಕ್ಷೆ ಎಲ್ಲರಲ್ಲೂ ಇತ್ತು, ಆದರೆ ಇದೀಗ ಈ ನಿರೀಕ್ಷೆ ತಲೆಕೆಳಗಾಗಿದೆ.  

ಆರ್‌ಸಿಬಿ ತಂಡ ರಾಹುಲ್‌ ಅವರನ್ನು 10 ಕೋಟಿಗೆ ಬಿಡ್‌ ಮಾಡಿತ್ತು, ಆದರೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 14 ಕೋಟಿ ಬಿಡ್‌ ಮಾಡುವ ಮೂಲಕ ಕೆಎಲ್‌ ರಾಹುಲ್‌ ಅವರನ್ನು ಖರೀದಿ ಮಾಡಿದೆ. ಇನ್ನೂ, ಈ ತಂಡದಲ್ಲಿ ರಾಹುಲ್‌ ಅವರು ನಾಯಕನಾಗಿ ಮುನ್ನಡೆಸುವುದು ಬಹುತೇಕ ಖಚಿತವಾಗಿದೆ.  

ರಿಷಬ್ ಪಂತ್ ತಂಡದಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಡೆಲ್ಲಿ ತಂಡಕ್ಕೆ ನಾಯಕನ ಅವಶ್ಯಕತೆ ತುಂಬಾ ಇತ್ತು, ಇದೇ ಕಾರಣದಿಂದಾಗಿ ಕೆಎಲ್‌ ರಹುಲ್‌ ಅವರನ್ನು ಡೆಲ್ಲಿ ತಂಡ 14 ಕೋಟಿಗೆ ಬಿಡ್‌ ಮಾಡಿ ಖರೀದಿ ಮಾಡಿದೆ.   

ಇದೀಗ, ಕೆಎಲ್‌ ರಾಹುಲ್‌ ಅವರು ಆರ್‌ಸಿಬಿ ತಂಡವಲ್ಲದೆ ಡೆಲ್ಲಿ ತಂಡದ ಪಾಲಾಗಿರುವುದು ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link