IPL 2025: ಬೆಂಗಳೂರು ತಂಡಕ್ಕೆ ಆನೆ ಬಲ ಆರ್‌ಸಿಬಿ ತಂಡದಿಂದ ನಾಯಕ ಡುಪ್ಲೆಸಿ ಔಟ್-ಹಿಟ್‌ಮ್ಯಾನ್ ರೋಹಿತ್ ಇನ್!
)
IPL 2025: 2025ರ ಐಪಿಎಲ್ ಮೆಗಾ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬಹುದಾದ ಐದು ಆಟಗಾರರ ರಿಟೈನ್ ಪಟ್ಟಿಯನ್ನು ರೆಡಿ ಮಾಡಿಕೊಳ್ಳುತ್ತಿದ್ದಾರೆ.
)
ಐಪಿಎಲ್ 2025ರ ಮೆಗಾ ಹರಾಜಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಕಾರಣ, ರಿಟೇನ್ ಆಟಗಾರರ ಪಟ್ಟಿಯನ್ನು ಅ.31ರ ಒಳಗೆ ಪ್ರಕಟಿಸುವಂತೆ ಎಲ್ಲಾ ಫ್ರಾಂಚೈಸಿಗಳಿಗೆ ಬಿಸಿಸಿಐ ಆದೇಶ ಹೊರಡಿಸಿದೆ.
)
ಇನ್ನೇನು ಬಿಸಿಸಿಐ ಈ ನಿಯಮವನ್ನು ಹೊರಡಿಸುವ ಮುನ್ನವೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಯಾವ ಯಾವ ಆಟಗಾರರು ಇರಬೇಕು ಎಂಬುದನ್ನು ಪ್ಲಾನ್ ಮಾಡಿಕೊಂಡಿದ್ದು, ಸಾಂಭವ್ಯ ಆಟಗಾರರ ಪಟ್ಟಿಯನ್ನು ರೆಡಿಯಾಗಿ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಂಬೈ ತಂಡದಿಂದ ರೋಹಿತ್ ಶರ್ಮಾ ಹೊರವುವ ನಿರ್ಧಾರ ಮಾಡಿದಂತಿದ್ದು, ಟಿ20 ವಿಶ್ವಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಕಪ್ತಾನನ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಇನ್ನೂ ಆರ್‌ಸಿಬಿ ತಂಡವಂತೂ ಈ ಭಾರಿ ಐಪಿಎಲ್ ಅನ್ನು ಗೆಲ್ಲಲೇ ಬೇಕು ಎಂಬ ನಿಟ್ಟಿನಲ್ಲಿ ಆಟಗಾರರ ಆಯ್ಕೆ ಮಾಡುತ್ತಿದೆ.
ಐಪಿಎಲ್ 2025ರಲ್ಲಿ ಅನೇಕ ದಿಗ್ಗಜರ ಪಾಿಗೆ ಸವಾಲಾಗಿದೆ. ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳಿಗೂ, 6 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಸಿಎಸ್‌ಕೆ ತಂಡ ಎಂ.ಎಸ್ ಧೋನಿ ಅವರನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲಿದೆ.
ಇನ್ನೂ ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದ್ದು, ತಂಡ ಹಾಲಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಅವರನ್ನು ತಂಡದಿಂದ ಕೈ ಬಿಟ್ಟು, ರೋಹಿತ್ ಶರ್ಮಾರವರನ್ನು ತಂಡಕ್ಕೆ ಕರೆತರುವ ಪ್ಲಾನ್ ಮಾಡುತ್ತಿದೆ.