ಪ್ಲೇಆಫ್ ಎಂಟ್ರಿ ಪಡೆಯಲು ಚೆನ್ನೈ ವಿರುದ್ಧ ಇಷ್ಟು ಅಂತರದಲ್ಲಿ ಗೆಲ್ಲಲೇಬೇಕು ಬೆಂಗಳೂರು: ಬದಲಾಗುವುದೇ RCB ಅದೃಷ್ಟ?
ಮೇ 18 ರಂದು ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಪಾಯಿಂಟ್ ಪಟ್ಟಿಯಲ್ಲಿ 3 ಅಥವಾ 4ನೇ ಸ್ಥಾನದಲ್ಲಿ ಮುಂದುವರಿಯಲಿದೆ. ಆದರೆ ಈಗಾಗಲೇ 14 ಅಂಕಗಳನ್ನು ಹೊಂದಿರುವ ಸಿಎಸ್’ಕೆ ವಿರುದ್ಧ ದೊಡ್ಡ ಗೆಲುವು ಸಾಧಿಸಿದರೆ ಮಾತ್ರ ಆರ್‌ಸಿಬಿ ಅಗ್ರ-4 ಹಂತವನ್ನು ತಲುಪಬಹುದು.
CSK ತಂಡವು +0.528 ನಿವ್ವಳ ರನ್ ರೇಟ್ ಅನ್ನು ಹೊಂದಿರುವುದರಿಂದ, RCB ತಂಡವು ಈ ನಿವ್ವಳ ರನ್ ರೇಟ್ ಅನ್ನು ಹಿಂದಿಕ್ಕಿ 14 ಅಂಕಗಳನ್ನು ಗಳಿಸಬೇಕಾಗಿದೆ. RCB ನಿವ್ವಳ ರನ್ ರೇಟ್ +0.387 ನೊಂದಿಗೆ CSK ಅನ್ನು ಯಾವ ಅಂತರದಿಂದ ಸೋಲಿಸಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ..
ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 18 ರನ್’ಗಳಿಂದ ಗೆಲ್ಲಬೇಕು. ಉದಾಹರಣೆಗೆ RCB ಸ್ಕೋರ್ 200 ರನ್ ಆಗಿದ್ದರೆ, CSK ಅನ್ನು 182 ಅಥವಾ ಅದಕ್ಕಿಂತ ಕಡಿಮೆ ರನ್’ಗಳಿಗೆ ಆಲ್ ಔಟ್ ಮಾಡಬೇಕು. ಈ ಮೂಲಕ ಕನಿಷ್ಠ 18 ರನ್ ಗಳಿಸಬೇಕು.
ಆರ್‌ಸಿಬಿ ಮೊದಲು ಬೌಲಿಂಗ್ ಮಾಡಿದರೆ, ಸಿಎಸ್‌ಕೆ ಕೇವಲ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕಾಗುತ್ತದೆ. ಉದಾಹರಣೆಗೆ, CSK 222 ರನ್’ಗಳ ಗುರಿಯನ್ನು ನಿಗದಿಪಡಿಸಿದರೆ, RCB 18.1 ಓವರ್‌ಗಳಲ್ಲಿ ಆ ಗುರಿಯನ್ನು ತಲುಪಬೇಕಾಗುತ್ತದೆ.
ಈ ಎರಡು ಅಂಕಿ ಅಂಶಗಳೊಂದಿಗೆ ಆರ್’ಸಿಬಿ ತಂಡ ಸಿಎಸ್‌ಕೆ ವಿರುದ್ಧ ಪೈಪೋಟಿ ನಡೆಸಲಿದೆ. ಈ ಅಂತರದ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹಿಂದಿಕ್ಕಿ ಪ್ಲೇಆಫ್ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.