IPL 2025: ಸ್ಟಾರ್‌ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?

Wed, 25 Sep 2024-1:37 pm,

RCB team: ಐಪಿಎಲ್ ಮೆಗಾ ಹರಾಜಿಗೆ ಸಿದ್ಧತೆಗಳು ನಡೆಯುತ್ತಿದೆ, ಈ ಭಾರಿ ಎಲ್ಲಾ ತಂಡಗಳಲ್ಲೂ ಭಾರಿ ಬದಲಾವಣೆ ಇದೆ ಎಂದು ಈಗಾಗಲೇ ನಿರೀಕ್ಷಿಸಲಾಗಿದ್ದು, ಊಹಿಸಿಯೂ ಇರದ ಆಟಗಾರರನ್ನು ಕೈ ಬಿಡುವ ಮೂಲಕ ಫ್ರಾಂಚೈಸಿಗಳು ಅಭಿಮಾನಿಗಳಿಗೆ ಆಘಾತ ನೀಡಿದೆ. 

ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆ ಎನ್ನುವ ಕಡೆಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಹಲವು ಸ್ಟಾರ್‌ ಆಟಗಾರರನ್ನು ತಂಡಗಳು ಕೈ ಬಿಉವ ನಿರ್ಧರಕ್ಕೆ ಬಂದಿದ್ದು, ಇದು ಮೆಗಾ ಹರಾಜಿಗೆ ರಂಗು ತರಲಿದ್ದು, ತಂಡಗಳ ನಡುವೆ ಕಾದಾಟ ನಡೆಯಲಿದೆ.

ಈ ಬಾರಿ ಆರ್‌ಸಿಬಿಯಲ್ಲಿ ಯಾವ ಆಟಗಾರರು ಇರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ದೊಡ್ಡ ಆಟಗಾರರು ಬಿಡುಗಡೆಯಾಗುತ್ತಾರೆ ಎಂದು ವರದಿಯಾಗಿದ್ದು, ಧಾರಣ ನೀತಿಯನ್ನು ಪರಿಚಯಿಸಿದ ನಂತರ ಈ ಬಗ್ಗೆ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅನುಮತಿಸಲಾಗುತ್ತದೆ ಎಂಬುದರ ಮೇಲೆ ಅನೇಕ ವಿಷಯಗಳು ಅವಲಂಬಿತವಾಗಿವೆ.

RCB ತನ್ನ ದೊಡ್ಡ ತಾರೆಗಳಲ್ಲಿ ಒಬ್ಬರಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು, ಇದೀಗ IPL 2025 ಹರಾಜಿನಲ್ಲಿ ಈ ಆಟಗಾರರನ್ನು ಕೈ ಬಿಡಲು  RCB ತಂಡ ಕೈಬಿಡಲು ಯೋಜನೆ ನಡೆಸುತ್ತಿದೆ. ಈ ಕ್ರಮವು ತಮ್ಮ ಮೊದಲ IPL ಟ್ರೋಫಿಯನ್ನು ಗೆಲ್ಲುವ ಅನ್ವೇಷಣೆಯಲ್ಲಿ RCB ಯ ಕಾರ್ಯತಂತ್ರದ ಭಾಗವಾಗಿದೆ.

ಐಪಿಎಲ್ 2024 ರಲ್ಲಿ 10 ಪಂದ್ಯಗಳಲ್ಲಿ ಕೇವಲ 52 ರನ್ ಗಳಿಸಲು ಸಾಧ್ಯವಾದ ನಿರಾಶಾದಾಯಕ ಋತುವಿನ ನಂತರ ಮ್ಯಾಕ್ಸ್‌ವೆಲ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು RCB ತಂಡ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ಇದೀಗ ನಾಯಕನ ಬದಲಾವಣೆಗೆ  RCB ತಂಡ ಸಿದ್ಧತೆ ನಡೆಸಿದ್ದು, ಫಾಫ್ ಡು ಪ್ಲೆಸಿಸ್‌ನನ್ನೂ ತಂಡದಿಂದ ಬಿಡುಗಡೆ ಮಾಡುವ ತಂತ್ರಗಾರಿಕೆ ನಡೆದಿದೆ. ಇನ್ನೂ, ಫಾಫ್ ಡು ಪ್ಲೆಸಿಸ್ ಬಿಡುಗಡೆಯಾದರೆ RCB ಗೆ ಹೊಸ ನಾಯಕ ಯಾರು? ಇದಕ್ಕಾಗಿ ಸಮೀಕರಣ ಸಿದ್ಧಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕೆಎಲ್ ರಾಹುಲ್ ಅವರನ್ನು ಕರೆತಂದು ನಾಯಕತ್ವ ನೀಡಬಹುದು ಎಂಬ ವದಂತಿಗಳು ಕೇಳಿ ಬರುತ್ತಿದ್ದು, ಲಕ್ನೋ ಸೂಪರ್ ಜೈಂಟ್ಸ್ ಈ ಋತುವಿನಲ್ಲಿ ಕೆಎಲ್ ರಾಹುಲ್ ಅವರನ್ನು ಬಿಡುಗಡೆ ಮಾಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link