ಒಂದು ಮಗುವಿನ ತಾಯಿಯಾದ್ರೂ ಇನ್ನೂ ಸ್ವರ್ಣಸುಂದರಿ ರಾಧಿಕಾ ಕುಮಾರಸ್ವಾಮಿ! ಇವರ ನಿಜವಾದ ವಯಸ್ಸೆಷ್ಟು ಗೊತ್ತಾ?
ನಟಿ ಮತ್ತು ನಿರ್ಮಾಪಕಿಯಾಗಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡ ಚಲನಚಿತ್ರ ರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. 2002 ರಲ್ಲಿ ʼನಿನಗಾಗಿʼ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಅವರು, 2012 ರಲ್ಲಿ ಶಮಿಕಾ ಎಂಟರ್‌ಪ್ರೈಸಸ್ ಮೂಲಕ ಯಶ್ ಅಭಿನಯದ ಲಕ್ಕಿ ಎಂಬ ತಮ್ಮ ಮೊದಲ ಚಲನಚಿತ್ರವನ್ನು ನಿರ್ಮಿಸಿದರು.
ಇನ್ನು ತಮ್ಮ 9ನೇ ತರಗತಿಯಲ್ಲಿರುವಾಗಲೇ ಸಿನಿಮಾ ಆಫರ್ ಪಡೆದ ರಾಧಿಕಾ ನೀಲಾ ಮೇಘ ಶಾಮದಲ್ಲಿ ಅಭಿನಯಿಸಿದರು. ಆದರೆ ಮೊದಲು ಬಿಡುಗಡೆಯಾದ ಸಿನಿಮಾ ʼನಿನಗಾಗಿʼ. ಆ ನಂತರ ಡಾ. ಶಿವರಾಜ್ ಕುಮಾರ್ ಜೊತೆ ʼತವರಿಗೆ ಬಾ ತಂಗಿʼ ಸಿನಿಮಾದಲ್ಲಿ ನಟಿಸಿ ಜನಮೆಚ್ಚುಗೆ ಪಡೆದರು.
ಈ ಎರಡೂ ಚಿತ್ರಗಳು ಅತ್ಯಂತ ಯಶಸ್ವಿಯಾಗಿತ್ತು. ಇನ್ನು ತಾಯಿ ಇಲ್ಲದ ತಬ್ಬಲಿಯಲ್ಲಿ ಗೌರಿ ಪಾತ್ರದಲ್ಲಿ ರಾಧಿಕಾ ಅಭಿನಯಿಸಿದ್ದು, ಈ ಪಾತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು,
ಇನ್ನು ಕನ್ನಡ ಮಾತ್ರವಲ್ಲದೆ, ನಾಲ್ಕು ತಮಿಳು ಚಿತ್ರ ಮತ್ತು ಒಂದು ತೆಲುಗು ಚಲನಚಿತ್ರಗಳಲ್ಲಿ ರಾಧಿಕಾ ನಟಿಸಿದ್ದಾರೆ. ರಾಧಿಕಾ ಅವರು ಚಲನಚಿತ್ರ ವಿತರಕರಾಗಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ. ಉಪೇಂದ್ರ ಮತ್ತು ದರ್ಶನ್ ನಟಿಸಿದ ಅನಾಥರು (2007) ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದ್ದರು.
ಇನ್ನು ಇವರ ಹಿನ್ನೆಲೆಯನ್ನು ನೋಡುವುದಾದರೆ, ದಕ್ಷಿಣ ಕನ್ನಡ ಬಂಟ ಕುಟುಂಬದಲ್ಲಿ ಜನಿಸಿದ ರಾಧಿಕಾ ಅವರು ರತನ್ ಕುಮಾರ್ ಎಂಬವರನ್ನು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 26 ನವೆಂಬರ್ 2000 ರಂದು ವಿವಾಹವಾದರು. ಆದರೆ ಕೆಲ ವರುಷಗಳ ನಂತರ ರತನ್ ಕುಮಾರ್ ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಕೆಲ ಮೂಲಗಳು ಹೇಳುತ್ತವೆ.
ರಾಧಿಕಾ ಅವರಿಗೆ ಶಮಿಕಾ ಎಂಬ ಮುದ್ದಾದ ಮಗಳಿದ್ದಾರೆ. ಅಂದಹಾಗೆ ಚಂದನವನದ ಈ ಸುಂದರಿಗೆ ಈಗ 37 ವರ್ಷ ವಯಸ್ಸು.