ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !

Thu, 19 Sep 2024-5:33 pm,

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಭಾರೀ ಜನಮನ್ನಣೆ ಪಡೆದಿದೆ. ಸೀತಾ ಮತ್ತು ಆಕೆಯ ಮಗು ಸಿಹಿಯ ಸುತ್ತ ಸುತ್ತುವ ಕತೆ ಇದು.

ಈಗ ಕತೆಯಲ್ಲಿ ಹೊಸ ಟ್ವಿಸ್ಟ್ ಬಂದಿದೆ. ಕತೆಯಲ್ಲಿ ಈಗ ಸಿಹಿಯ ನಿಜವಾದ ಪೋಷಕರ ಎಂಟ್ರಿಯಾಗಿದೆ.   

ಸಿಹಿಯ ನಿಜವಾದ ತಾಯಿಯ ಪಾತ್ರದಲ್ಲಿ ಚಂದನಾ ಮಹಾಲಿಂಗಯ್ಯ ಕಾಣಿಸಿಕೊಂಡಿದ್ದಾರೆ. ಚಂದನಾ ಈ ಧಾರಾವಾಹಿಯಲ್ಲಿ ಶಾಲಿನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. 

ನಟಿ ಚಂದನಾ ಪತಿ  ದೀಪಕ್ ಮಹಾದೇವ್. ಇವರಿಬ್ಬರಿಗೆ ಮದುವೆಯಾಗಿ ಡಿಸೆಂಬರ್ ಗೆ ಮೂರು ವರ್ಷವಾಗಲಿದೆ. 

ದೀಪಕ್ ಮಹಾದೇವ್ ನಾ ನಿನ್ನ ಬಿಡಲಾರೆ, ನಾಯಕಿ, ನಿನ್ನಿಂದಲೇ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.   

ನಟನೆಯ ಜೊತೆಗೆ ದೀಪಕ್ ಪ್ರೊಡಕ್ಷನ್ ಹೌಸ್ ವೊಂದರಲ್ಲಿ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link