ಅಮೃತಧಾರೆಯ ಅಪರ್ಣಾ ನಿಜವಾದ ಪತಿ ಇವರೇ !ಇವರು ಕೂಡಾ ಕಿರು ತೆರೆಯಲ್ಲಿ ಮಿಂಚಿದವರೇ !

Tue, 23 Jul 2024-6:13 pm,

ಸ್ವಾತಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅಪರ್ಣಾ ಪಾತ್ರದ ಮೂಲಕ ಸ್ವಾತಿ ಮನೆ ಮಾತಾಗಿದ್ದಾರೆ.  

ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿ ಪಾತ್ರ ಎಷ್ಟು ಜನಪ್ರಿಯವೋ ಆನಂದ್ ಮತ್ತು ಅಪರ್ಣ ಪಾತ್ರ ಕೂಡಾ ಅಷ್ಟೇ ಜನ ಮೆಚ್ಚುಗೆ ಗಳಿಸಿದೆ. 

ಗಂಡನ ಎಲ್ಲಾ ಕೆಲಸದಲ್ಲಿ ಸಾಥ್ ನೀಡುವ ಹೆಂಡತಿಯಾಗಿ ಸ್ವಾತಿ ಈ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿಯೂ ಸ್ವಾತಿ ಅದೇ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. 

ಅಂದ ಹಾಗೆ ನಿಜ ಜೀವನದಲ್ಲಿ ಸ್ವಾತಿಯದ್ದು ಅದ್ಭುತ ಪ್ರೇಮ ಕತೆ.  9ನೇ  ತರಗತಿಯಿಂದಲೇ ಪಕ್ಕದ ಮನೆ ಹುಡುಗನನ್ನೇ ಲವ್ ಮಾಡಿರುವ ಸ್ವಾತಿ ಪ್ರೇಮ ಕತೆ ೨೫ ವರ್ಷ ಪೂರೈಸಿದೆ. 

ಸ್ವಾತಿ ಪತಿ ಅನಿಲ್ ಕೂಡಾ ಕಿರುತೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರಿಬ್ಬರೂ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ವಿನ್ನರ್ ಕೂಡಾ ಆಗಿ ಹೊರಹೊಮ್ಮಿದ್ದಾರೆ.   

ಬ್ಯುಸಿನೆಸ್ ಮ್ಯಾನ್ ಆಗಿರುವ ಅನಿಲ್ ಕೆಲವೊಂದು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾಂತಂಪಾಪಂ ಎಪಿಸೋಡ್ ನಲ್ಲಿಯೂ  ಕಾಣಿಸಿಕೊಂಡಿದ್ದರು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link