ನಮ್ಮ ಲಚ್ಚಿಯ `ಸಂಗಮ್ ` ವಿಜಯ್ ಸೂರ್ಯ ಪತ್ನಿ ಮತ್ತು ಮುದ್ದಾದ ಮಕ್ಕಳು ಇವರೇ ! ಪತ್ನಿ ಏನು ಮಾಡುತ್ತಿದ್ದಾರೆ ಗೊತ್ತಾ ?

Tue, 12 Dec 2023-12:10 pm,

ವಿಜಯ್ ಸೂರ್ಯ ಹೆಣ್ಣು ಮಕ್ಕಳ ಹಾಟ್ ಫೆವರಿಟ್. ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ.   

ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ  ಮನೆ ಮಾತಾದ ವಿಜಯ್ ಸೂರ್ಯಗೆ  ಫೀಮೇಲ್ ಫ್ಯಾನ್ಸ್ ಜಾಸ್ತಿ. ಇವರು ವಿಜಯ ಸೂರ್ಯ ಅನ್ನುವುದಕ್ಕಿಂತ ಈಗಲೂ ಸಿದಾರ್ಥ್ ಎಂದೇ ಖ್ಯಾತಿ ಹೊಂದಿದ್ದಾರೆ. 

ಪಾರ್ವತಿ ಪರಮೇಶ್ವರ' ಸೀರಿಯಲ್‌ನಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ನಟ ಜಾಕಿ ಶ್ರಾಫ್ ಅವರ 'ಉಸ್ಸಫರ್' ಎಂಬ ಕಿರುಚಿತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಕದ್ದುಮುಚ್ಚಿ ಮತ್ತು ಲಕ್ನೌ ಟು ಬೆಂಗಳೂರು, ಇಷ್ಟಕಾಮ್ಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.   

 ಚಿತ್ರರಂಗಕ್ಕೆ ಬರುವ ಮುನ್ನ ಮಾಡಲ್ ಆಗಿದ್ದ ವಿಜಯ್ ಸೂರ್ಯ ಬೆಂಗಳೂರು ಮೆಗಾ ಮಾಡೆಲ್ ಹಂಟ್ 2011ರ ವಿಜೇತ ಕೂಡಾ. 

ಸದ್ಯ ಸ್ಟಾರ್ ಸುವರ್ಣ ಚಾನೆಲ್ ನ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಸಂಗಮ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. 

ವಿಜಯ್ ಸೂರ್ಯ ಅವರಿಗೆ ನಾಲ್ಕು ವರ್ಷದ ಹಿಂದೆಯೇ ವಿವಾಹವಾಗಿದ್ದು, ಅವರಿಗೆ ಇಬ್ಬರು ಮುದ್ದು ಮಕ್ಕಳಿದ್ದಾರೆ. 

ಇವರು ವರಿಸಿದ್ದು ತಮ್ಮ ತಮ್ಮ ದೂರದ ಸಂಬಂಧಿ ಸಾಫ್ಟ್ವೇರ್ ಎಂಜಿನಿಯರ್ ಚೈತ್ರಾ ಅವರನ್ನು.   

ಇವರ ಮಕ್ಕಳ ಹೆಸರು ಸೋಹನ್‌ ಸೂರ್ಯ ಮತ್ತು ಕಾರ್ತಿಕೇಯ ಸೂರ್ಯ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link