ಇದೇ ಕಾರಣಕ್ಕೆ ಶಿವರಾಜ್‌ಕುಮಾರ್ ಅಸಲಿ ಹೆಸರು ಬದಲಾಯಿಸಿದ್ದು! ಶಿವಣ್ಣನ ಹುಟ್ಟು ಹೆಸರು ಇದಾಗಿತ್ತು !
ಶಿವರಾಜ್ ಕುಮಾರ್ ಚಂದನವನದ ದೊಡ್ಮನೆಯ ಹಿರಿಯ ಮಗ. ಚಂದನವನದ ಎಲ್ಲಾ ಕಲಾವಿದರ ಹಿರಿಯ ಅಣ್ಣ.
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಶಿವರಾಜ್ ಕುಮಾರ್ ಮಾಡದ ಪಾತ್ರಗಳೇ ಇಲ್ಲ. ಎಂಥಾ ಸಿನಿಮಾವಾದರೂ ಸರಿ ಎಂಥಾ ಪಾತ್ರವಾದರೂ ಸರಿ ಎಲ್ಲಾ ರೀತಿಯ ನಟನೆಗೂ ಸೈ ಎಂದು ಮುನ್ನುಗ್ಗುವ ಕಲಾವಿದ.
ಚಿತ್ರರಂಗಕ್ಕೆ ಬರುವ ಮುನ್ನ ಬಹಳಷ್ಟು ಕಲಾವಿದರು ತಮ್ಮ ಹೆಸರು ಬದಲಾಯಿಸಿಕೊಳ್ಳುವುದು ಇದೆ. ಶಿವರಾಜ್ ಕುಮಾರ್ ಕೂಡಾ ಅದೇ ಸಾಲಿನಲ್ಲಿ ಬರುತ್ತಾರೆ.
ಇಂದು ಶಿವರಾಜ್ ಕುಮಾರ್ ಎಂದೇ ಖ್ಯಾತಿ ಪಡೆದಿರುವ ಇವರ ಹುಟ್ಟು ಹೆಸರು ನಾಗರಾಜು ಶಿವಪುಟ್ಟಸ್ವಾಮಿ. ಕಾಲೇಜು ಮುಗಿಸುವವರೆಗೂ ಇದೇ ಹೆಸರಿನಿಂದ ಅವರನ್ನು ಕರೆಯಲಾಗುತ್ತಿತ್ತು. ದಾಖಲೆಗಳಲ್ಲಿ ಇಂದಿಗೂ ಇದೇ ಹೆಸರು ಇದೆಯಂತೆ.
ನಾಗರಾಜು ಶಿವಪುಟ್ಟಸ್ವಾಮಿ, ಶಿವರಾಜ್ ಕುಮಾರ್ ಆಗಿ ಬದಲಾದದ್ದು ಚಿತ್ರ ರಂಗಕ್ಕೆ ಎಂಟ್ರಿ ಕೊಡುವ ಹೊತ್ತಿನಲ್ಲಿ. ಈ ಹೆಸರು ಬದಲಾಯಿಸುವಂತೆ ಡಾ.ರಾಜ್‌ಕುಮಾರ್ ಅವರ ಸ್ನೇಹಿತ ರಾಮಸ್ವಾಮಿ ಎಂಬುವವರು ಸಲಹೆ ನೀಡಿದ್ದರಂತೆ.
ತಾತನ ಹೆಸರಿನ ಬದಲು ತಂದೆಯ ಹೆಸರನ್ನು ಜೊತೆಯಲ್ಲಿ ಸೇರಿಸುವಂತೆ ಹೇಳಿದ್ದರಂತೆ. ಇದಕ್ಕೆ ಒಪ್ಪಿದ ಅಣ್ಣಾವ್ರು ನಾಗರಾಜು ಶಿವಪುಟ್ಟಸ್ವಾಮಿ ಎನ್ನುವ ಹೆಸರನ್ನು ಶಿವರಾಜ್‌ಕುಮಾರ್ ಅಂತ ಬದಲಾಯಿಸುವುದಕ್ಕೆ ಒಪ್ಪಿಗೆ ಸುಚಿಸಿದ್ದರಂತೆ.
ಹಾಗಾಗಿ ಮೊದಲ ಸಿನಿಮಾ 'ಆನಂದ್' ಟೈಟಲ್ ಕಾರ್ಡ್ ನಲ್ಲಿ ನಾಯಕ ಹೆಸರು ಶಿವಪುಟ್ಟಸ್ವಾಮಿ ಬದಲು ಶಿವರಾಜ್‌ಕುಮಾರ್ ಅಂತ ಬದಲಾಯಿತು. ಅಲ್ಲಿಂದ ಇಡೀ ಕರ್ನಾಟಕದಲ್ಲಿ ಶಿವರಾಜ್ ಕುಮಾರ್ ಎಂದೇ ಪ್ರೀತಿಸಲ್ಪಡುತ್ತಾರೆ.
ಈಗ ಕನ್ನಡ ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ಅನ್ನೋದು ಬಹಳ ದೊಡ್ಡ ಹೆಸರು. ಈಹೆಸರಿನ ಜೊತೆಗೆ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎನ್ನುವ ಬಿರುದುಗಳೂ ಸೇರುತ್ತಾ ಹೋಯಿತು.