ಭಾಗ್ಯ ಅಲ್ಲ, ಬಾಲಿವುಡ್ ಬೆಡಗಿಯರನ್ನೂ ಮೀರಿಸುವ ಸೌಂದರ್ಯ ಭಾಗ್ಯಲಕ್ಷ್ಮೀಯ ತಾಂಡವ್ ರಿಯಲ್ ಪತ್ನಿಯದ್ದು !ಕನ್ನಡದ ಖ್ಯಾತ ನಟಿಯೇ ಇವರ ಮುದ್ದು ಮಡದಿ
ಕಲರ್ಸ್ ಕನ್ನಡದಲ್ಲಿ ನಿತ್ಯ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿ ಮಹಿಳೆ ಯರ ಅಚ್ಚು ಮೆಚ್ಚಿನ ಸೀರಿಯಲ್.
ಈ ಧಾರವಾಹಿಯ ಮುಖ್ಯ ಪಾತ್ರಧಾರಿ ಭಾಗ್ಯ ಕಂಡರೆ ಮಹಿಳೆಯರಿಗೆ ಭಾರೀ ಅನುಕಂಪ.ಅದೇ ಭಾಗ್ಯ ಪತಿ ತಾಂಡವ್ ಕಂಡರೆ ಕೆಂಡದಂಥಹ ಕೋಪ.
ಧಾರಾವಾಹಿಯಲ್ಲಿ ಮುತ್ತಿನಂಥಹ ಹೆಂಡತಿ ಭಾಗ್ಯಳನ್ನು ಬಿಟ್ಟು ಬೇರೆ ಮಹಿಳೆಯ ಸಹವಾಸ ಮಾಡಿದ ತಾಂಡವ್ ಗೆ ಶಾಪ ಹಾಕದ ಮಹಿಳೆಯೇ ಇರಲಿಕ್ಕಿಲ್ಲ.
ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್ ಪಾತ್ರಧಾರಿಯಾಗಿರುವ ನಟ ಸುದರ್ಶನ್ ರಂಗ ಪ್ರಸಾದ್. ಇವರು ನಿಜ ಜೀವನದಲ್ಲಿ ತಮ್ಮ ಧಾರಾವಾಹಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನ.
ನಿಜ ಜೀವನದಲ್ಲಿ ಇವರಿಗೆ ಅವರ ಪತ್ನಿಯೇ ಪ್ರಪಂಚ. ಪತ್ನಿಗಾಗಿ ಏನು ಬೇಕಾದರೂ ಮಾಡಲು ಸಿದ್ದರಿರುವ ಪತಿ ಇವರು. ಪ್ರೀತಿಸಿ ಮದುವೆಯಾದ ಈ ಜೋಡಿಯ ವೈವಾಹಿಕ ಜೀವನಕ್ಕೆ ೯ ವರ್ಷಗಳು ತುಂಬಿವೆ.
ರಂಗ ಪ್ರಸಾದ್ ಅವರ ಪತ್ನಿ ಕೂಡಾ ಕನ್ನಡದ ನಟಿಯೇ. ಅವರ ಹೆಸರು ಸಂಗೀತಾ ಭಟ್.
ಸಂಗೀತಾ ಭಟ್ ಎರಡನೇ ಸಲ, ದಯವಿಟ್ಟು ಗಮನಿಸಿ, ಕಿಸ್ಮತ್ ಮುಂದಾದ ಚಿತ್ರಗಳಲ್ಲಿ ನಟಿಸಿದ್ದಾರೆ.