ಗೋಲ್ಡನ್ ಸ್ಟಾರ್ ಗಣೇಶ್ ರಾತೋ ರಾತ್ರಿ ಮದುವೆಯಾಗಿರುವುದು ಇದೇ ಕಾರಣಕ್ಕಂತೆ! ಅವರ ವಿವಾಹಕ್ಕೆ ಮುಳ್ಳಾಗಿದ್ದರಂತೆ ಇವರು !
ಗಣೇಶ್ ಹುಟ್ಟು ಸಿರಿವಂತನೂ ಅಲ್ಲ.ಸಿನಿಮಾ ರಂಗದಲ್ಲಿ ಯಾವ ಗಾಡ್ ಫಾದರ್ ಕೂಡಾ ಇರಲಿಲ್ಲ. ತನ್ನ ಪರಿಶ್ರಮದ ಮೂಲಕವೇ ಗೋಲ್ಡನ್ ಸ್ಟಾರ್ ಎನ್ನುವ ಪಟ್ಟ ಕ್ಕೆ ಏರಿದವರು.
ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ಗಣೇಶ್, ಮುಂಗಾರು ಮಳೆ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.
ಹೀಗೆ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಗಣೇಶ್ ಮದುವೆಯಾದರು ಎನ್ನುವ ಸುದ್ದಿ ರಾತೊರಾತ್ರಿ ಬಂದೆರಗಿತ್ತು. ಹೌದು, ಮಧ್ಯರಾತ್ರಿಯೇ ಗಣೇಶ್ ಮತ್ತು ಶಿಲ್ಪಾ ಮಾಡುವೆ ನಡೆದಿದ್ದು. ಇದು ಆ ಸಂದರ್ಭದಲ್ಲಿ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಸ್ಟಾರ್ ಒಬ್ಬನ ಮದುವೆ ಹೀಗೆ ಯಾಕಾಯಿತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ಈ ಮದುವೆಯ ಹಿಂದೆ ಅಂತೆ ಕಂತೆಗಳ ಕತೆಗಳೂ ಹುಟ್ಟಿಕೊಂಡಿತ್ತು. ಅವರ ಮದುವೆಗೆ ಗಣೇಶ ಪಡೆದುಕೊಂಡಿದ್ದ ಜನಪ್ರಿಯತೆಯೇ ಮುಳುವಾಗಿತ್ತಂತೆ. ಈ ಮಾತನ್ನು ಸ್ವತಹ ಗಣೇಶ್ ಅವರೇ ಕಾರ್ಯಕ್ರಮವೊಂದರಲ್ಲಿ ಇದನ್ನು ಹೇಳಿಕೊಂಡಿದ್ದಾರೆ.
ಗಣೇಶ್ ಗಿದ್ದ ಪಾಪ್ಯುಲಾರಿಟಿಯೇ ಅವರಿಗೆ ಆ ಸಂದರ್ಭದಲ್ಲಿ ಅತೀವ ನೋವು ಕೂಡಾ ನೀಡಿತ್ತಂತೆ. ತಾನು ಸಿನಿಮಾದಲ್ಲಿದ್ದು, ಜನಪ್ರಿಯತೆ ಗಳಿಸಿರುವುದು ತನ್ನ ಪ್ರೀತಿ ಪಾಲಿಗೆ ಮುಳ್ಳಾಯಿತಾ ಎಂದು ಬಹಳ ನೊಂದು ಕೊಂಡಿದ್ದರಂತೆ.
. ಒಂದು ಹಂತದಲ್ಲಿ ಸಿನಿಮಾ ರಂಗವನ್ನು ಬಿಡುವ ಯೋಚನೆ ಕೂಡಾ ಬಂದಿತ್ತಂತೆ. ಆದರೆ ನಂತರ ಎಲ್ಲವನ್ನೂ ಧೈರ್ಯವಾಗಿ ನಿಭಾಯಿಸಿಕೊಂಡರು ಗಣೇಶ್ ಮತ್ತು ಶಿಲ್ಪಾ.
ಇದೀಗ ಸುಖ ದುಃಖದಲ್ಲಿ ಒಬ್ಬರಿಗೊಬ್ಬರು ಜೊತೆ ನಿಂತು ನೆಮ್ಮದಿಯ ಬದುಕು ಸಾಗಿಸುವ ಸುಂದರ ಜೋಡಿ ಇವರದ್ದು. ಸಿನಿಮಾಗಳಲ್ಲಿ ನಟನಾಗಿ ಮಿಂಚಿರುವ ಗಣೇಶ್ ಒಳ್ಳೆಯ ಪತಿ ಮತ್ತು ಅಪ್ಪ ಎಂದೆನಿಸಿಕೊಂಡಿದ್ದಾರೆ ಕೂಡಾ.