ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿ
ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 27 ಅಂತಸ್ತಿನ ಐಷಾರಾಮಿ ಬಂಗಲೆ ಆಂಟಿಲಿಯಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ದುಬಾರಿ ಕಟ್ಟಡಗಳಲ್ಲಿ ಒಂದಾಗಿದೆ.ಈ 568 ಅಡಿ ಎತ್ತರದ ಕಟ್ಟಡವು ಭಾರತದ ಅತಿದೊಡ್ಡ ಉದ್ಯಮಿ ಮುಖೇಶ್ ಅಂಬಾನಿ ಅವರ ಹೆಮ್ಮೆಯಾಗಿದೆ.
37000 ಚದರ ಮೀಟರ್‌ಗಳಲ್ಲಿ ಹರಡಿರುವ ಆಂಟಿಲಿಯಾ ದಕ್ಷಿಣ ಮುಂಬೈನಲ್ಲಿದೆ.ಇದು ಮುಂಬೈನ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ.ಈ ಕಟ್ಟಡದಿಂದ ಅರಬ್ಬೀ ಸಮುದ್ರ ಮತ್ತು ಇಡೀ ನಗರದ ಸುಂದರ ನೋಟವು ಕಾಣಿಸುತ್ತದೆ.
ಆಂಟಿಲಿಯಾ ನಿರ್ಮಾಣವು 2006ರಲ್ಲಿ ಪ್ರಾರಂಭವಾಗಿ, 2010ರಲ್ಲಿ ಸಂಪೂರ್ಣವಾಗಿ ಪೂರ್ಣಗೊಂಡಿತ್ತು. ಇದನ್ನು ನಿರ್ಮಿಸಲು ಸುಮಾರು 15,000 ಕೋಟಿ ರೂ.ವೆಚ್ಚವಾಗಿತ್ತು.
ಈ ಮನೆ ವಾಸಿಸಲು ಸಿದ್ಧವಾಗಿದ್ದರೂ, ಅಂಬಾನಿ ಕುಟುಂಬವನ್ನು ಕಾಡುತ್ತಿದ್ದ ಒಂದು ಭಯದಿಂದ 2011 ರವರೆಗೆ ಪರಿವಾರ ಹೊಸ ಮನೆಗೆ ಶಿಫ್ಟ್ ಆಗಲಿಲ್ಲ.
ಈ ಗಗನಚುಂಬಿ ಕಟ್ಟಡದ ಗೃಹ ಪ್ರವೇಶ ಪೂಜೆ ಕೂಡ ನವೆಂಬರ್ 2010 ರಲ್ಲಿ ನಡೆಯಿತು.ಆದರೆ ಅಂಬಾನಿ ಕುಟುಂಬವು 2011 ರವರೆಗೂ ಆ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿಲ್ಲ.
ಅಲ್ಲಿ ವಾಸಿಸುವುದರಿಂದ ತಮಗೆ ಏನಾದರೂ ತೊಂದರೆಯಾಗಬಹುದು ಎನ್ನುವ ಭಯದಿಂದ ಅವರು ಆ ಕಟ್ಟಡಕ್ಕೆ ಸ್ಥಳಾಂತರಗೊಂದಿರಲಿಲ್ಲ. ಬಳಿಕ 50 ಮಂದಿ ಪಂಡಿತರು ಈ ಕಟ್ಟಡದಲ್ಲಿ ಪೂಜೆ ಸಲ್ಲಿಸಿ ವಾಸ್ತು ದೋಷ ನಿವಾರಣೆ ಮಾಡಿದರು.
ಪೂಜೆ ಮತ್ತು ವಾಸ್ತು ದೋಷಗಳ ಪರಿಹಾರದ ನಂತರ, ಅಂಬಾನಿ ಕುಟುಂಬವು ಸೆಪ್ಟೆಂಬರ್ 2011 ರಲ್ಲಿ ಆಂಟಿಲಿಯಾಕ್ಕೆ ಸ್ಥಳಾಂತರಗೊಂಡಿತು.ಈ ಅರಮನೆಯನ್ನು ನೀತಾ ಅಂಬಾನಿ ವಿನ್ಯಾಸಗೊಳಿಸಿದ್ದಾರೆ.