ʼಈʼ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸದೇ ಇತರೆ ಭಾಷೆಗಳ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ.. ಕನ್ನಡ, ತೆಲುಗು, ಮಲಯಾಳಂ, ಭಾಷೆಗಳಲ್ಲಿ ಅಭಿನಯಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ..
ಆಕಸ್ಮಿಕವಾಗಿ ಚಿತ್ರರಂಗಕ್ಕೆ ಕಾಲಿಟ್ಟ ರಜನಿಕಾಂತ್ ಖಳನಾಯಕನಾಗಿ ನಟಿಸುವ ಮೂಲಕ ಜನರಿಗೆ ಪರಿಚಯವಾದರು.. ಅಲ್ಲಿಂದ ಯಶಸ್ಸು ಇವರನ್ನು ಹಿಂಬಾಲಿಸುತ್ತಿದೆ... ಹಾಗಾದ್ರೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್ ಕನ್ನಡ ಸಿನಿಮಾರಂಗದಿಂದ ದೂರವಾಗಿದ್ದು ಯಾಕೆ?
ಕನ್ನಡದಲ್ಲಿಯೂ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ರಜನಿಕಾಂತ್ ಸಿವಿ ರಾಜೇಂದ್ರನ್ ಅವರು ನಿರ್ದೇಶಿಸಿದ ಘರ್ಜನೆ ಎಂಬ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು..
ಈ ಘರ್ಜನೆ ಸಿನಿಮಾದಲ್ಲಿ ನಟ ಮಾಧವಿಗೆ ಜೋಡಿಯಾಗಿ ನಟಿಸಿದ್ದರು.. ಇದು ಕನ್ನಡ, ತಮಿಳು, ಮಲಯಾಳಂ, ಭಾಷೆಯಲ್ಲಿ ನಿರ್ಮಾಣವಾಗಿತ್ತು.. ಈ ಸಿನಿಮಾದಲ್ಲಿ ವೈಧ್ಯರ ಪಾತ್ರದಲ್ಲಿ ನಟಿಸಿ ರಜನಿ ಎಲ್ಲರ ಮನಗೆದ್ದಿದ್ದರು.. ಇದಾದ ನಂತರ ನಟ ರಜನಿಕಾಂತ್ ಅವರಿಗೆ ತಮಿಳು ಸಿನಿಮಾಗಳ ಆಫರ್ ಹೆಚ್ಚು ಬರಲಾರಂಭಿಸಿದವು.. ಅವರನ್ನು ನೋಡಲೇಂದೇ ಸಿನಿಮಾ ನೋಡುತ್ತಿದ್ದ ಕಾಲವದು..
ಇನ್ನು ಕನ್ನಡ ಸಿನಿರಂಗದಲ್ಲಿ ಆಗ ವಿಷ್ಣುವರ್ಧನ್ ಹಾಗೂ ರಾಜ್‌ಕುಮಾರ್ ಅವರಂತಹ ದಿಗ್ಗಜ ಕಲಾವಿದರ ಹಾವಳಿ ಇತ್ತು.. ಹೀಗಾಗಿ ನಟ ರಜನಿಕಾಂತ್ ತಮಿಳು ಸಿನಿಮಾರಂಗವನ್ನೇ ಆಯ್ಕೆ ಮಾಡಿಕೊಂಡರು.