ಪ್ರಭಾಸ್- ಅನುಷ್ಕಾ ಶೆಟ್ಟಿ ಇನ್ನೂ ಹಸೆಮಣೆ ಏರದಿರುವುದಕ್ಕೆ ಇದೇ ಕಾರಣವಂತೆ !
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆ ಮಾತು ಮತ್ತೆ ಸದ್ದು ಮಾಡುತ್ತಿದೆ. ಅದೆಷ್ಟೋ ಸಮಯದಿಂದ ಇವರಿಬ್ಬರ ಒಡನಾಟದ ಸುದ್ದಿಗಳು ಕೇಳಿ ಬಂದಿದ್ದರೂ ಇನ್ನೂ ಇವರು ಹಣೆ ಮಣೆ ಏರಿಲ್ಲ .
ಮಾಹಿತಿಯ ಪ್ರಕಾರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಗೆ ಎರಡೂ ಕುಟುಂಬಗಳ ಸಮ್ಮತಿ ಇದೆಯಂತೆ.
ಎರಡೂ ಕುಟುಂಬಗಳ ಒಪ್ಪಿಗೆಯೇ ಮೇರೆಗೆ ಬಹಳ ಹಿಂದೆಯೇ ಇಬ್ಬರ ಮದುವೆ ಕೂಡಾ ನಿಶ್ಚಯವಾಗಿದೆಯಂತೆ.
ಆದರೆ ಇವರಿಬ್ಬರ ಮದುವೆಗೆ ಅಡ್ಡಿಯಾಗುತ್ತಿರುವುದು ಜಾತಕ ಎಂದು ಹೇಳಲಾಗುತ್ತಿದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಜಾತಕ ಹೊಂದಾಣಿಕೆ ಆಗದಿರುವುದೇ ವಿವಾಹ ತಡವಾಗಲು ಕಾರಣವಂತೆ.
ಪ್ರಭಾಸ್ ಮತ್ತು ಅನುಷ್ಕಾ ಎಲ್ಲಿಯೂ ತಮ್ಮ ನಡುವಿನ ಪ್ರೀತಿ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇಬ್ಬರೂ ಇಲ್ಲಿಯವರೆಗೂ ನಾವಿಬ್ಬರು ಬರೀ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದಾರೆ.