ವಯಸ್ಸು 59 ಆದ್ರೂ ಕೋವೈ ಸರಳಾ ಇನ್ನೂ ಮದುವೆಯಾಗದಿರಲು ಕಾರಣ ಇವರೇ..! ಅವರಿಗಾಗಿ ಬದುಕನ್ನೇ ತ್ಯಾಗ ಮಾಡಿದ್ರು…
ಒಂದು ಕಾಲದಲ್ಲಿ ರಮಾಪ್ರಭಾ ಮತ್ತು ಶ್ರೀಲಕ್ಷ್ಮಿ ಜನರೇಷನ್ ಮುಗಿದ ನಂತರ ಆ ಮಟ್ಟಕ್ಕೆ ಲೇಡಿ ಕಾಮಿಡಿಯನ್’ಗಳು ಬಂದಿರಲಿಲ್ಲ. ಇಂತಹ ಹೊತ್ತಿನಲ್ಲಿ ಕೋವೈ ಸರಳಾ ಸುಮಾರು ಎರಡೂವರೆ ದಶಕಗಳ ಕಾಲ ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಅಸ್ತಿತ್ವವನ್ನು ಕ್ರಿಯೇಟ್ ಮಾಡಿದ್ದಲ್ಲದೆ, ಹವಾ ಸೃಷ್ಟಿಸಿದ್ದಾರೆ.
ಮೂರು ಭಾಷೆಗಳಲ್ಲಿ 800 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸರಳ, ಅನೇಕ ಪ್ರಶಸ್ತಿಗಳು, ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಇದೆಲ್ಲವೂ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದೆ.
ಆದರೆ ವೈಯಕ್ತಿಕ ಜೀವನದಲ್ಲಿ ಆಕೆ ಮಾಡಿದ ತ್ಯಾಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಕೋವೈ ಸರಳಾ ಅವರಿಗೆ ಪ್ರಸ್ತುತ 59 ವರ್ಷ. ಆದರೆ ಇನ್ನೂ ಮದುವೆಯಾಗಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ನಾಲ್ಕು ಕಿರಿಯ ಸಹೋದರಿಯರ ಕುಟುಂಬದಲ್ಲಿ ಕೋವೈ ಸರಳಾ ಹಿರಿಯ ಮಗಳು. ಚಿಕ್ಕ ವಯಸ್ಸಿನಲ್ಲೇ ಅವರ ಜವಾಬ್ದಾರಿಯನ್ನು ವಹಿಸಿಕೊಂಡರು. ಸ್ಟಾರ್ ಕಾಮಿಡಿಯನ್ ಆಗಿ ದುಡಿದ ಹಣವನ್ನೆಲ್ಲ ತಂಗಿಯರಿಗಾಗಿಯೇ ಖರ್ಚು ಮಾಡಿದರು.
ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗೋಣ ಎಂದು ಯೋಚಿಸಿದಾಗ ಸಮಯ ಮೀರಿಹೋಗಿತ್ತು. ಈ ಹೊತ್ತಿನಲ್ಲಿ ಮದುವೆ ಆಗಬೇಕು.. ತನಗೂ ಒಂದು ಜೀವನ ಬೇಕು ಎಂದು ಅಂದುಕೊಳ್ಳದ ಕೋವೈ ಸರಳಾ, ತನ್ನ ಸಹೋದರಿಯರಿಗಾಗಿ ಯೋಚಿಸುತ್ತಿದ್ದರು.
“ಮದುವೆಯಾಗಿಲ್ಲ ಎಂಬ ಕೊರಗು ಇಲ್ಲ. ನನ್ನ ತಂಗಿಯರ ಜೀವನ ಚೆನ್ನಾಗಿದೆ, ಈ ಜೀವನಕ್ಕೆ ಅಷ್ಟೇ ಸಾಕು” ಎಂದು ಕೋವೈ ಸರಳಾ ಹೇಳಿದ್ದಾರೆ. ಆಕೆಯ ಈ ತ್ಯಾಗದ ಬಗ್ಗೆ ತಿಳಿದು ಅಭಿಮಾನಿಗಳು ಕೈ ಎತ್ತಿ ಮುಗಿಯುತ್ತಿದ್ದಾರೆ.