ಡಾರ್ಲಿಂಗ್ ಪ್ರಭಾಸ್ ಇಷ್ಟು ವಯಸ್ಸಾದ್ರು ಮದುವೆಯಾಗದೆ ಇರಲು ಕಾರಣ ಏನು ಗೊತ್ತಾ..? ಕೊನೆಗೂ ರಿವೀಲ್ ಆಯ್ತು ಶಾಕಿಂಗ್ ಸತ್ಯ..?!
Prabhas Marriage: ನಟ ಡಾರ್ಲಿಂಗ್ ಪ್ರಭಾಸ್ ಅಂದ್ರೆ ಯಾವ ಹುಡುಗಿಗೆ ತಾನೆ ಇಷ್ಟ ಇಲ್ಲ ಹೇಳಿ.. ಇವರು ಹೆಣ್ಣು ಮಕ್ಕಳ ಕ್ಯೂಟ್ ಕ್ರಶ್ ಅಂತಲೇ ಹೇಳಬಹುದು. ಆದರೆ ಎಲ್ಲರಿಗೂ ಇರುವ ಆತಂಖ ಏನು ಅಂದ್ರೆ ನಟ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದು. ಅದಕ್ಕೆ ಒಂದು ಕಾರಣ ಇದೆ! ಏನು ಆ ಕಾರಣ ತಿಳಿಯಲು ಮುಂದೆ ಓದಿ...
ನಟ ಪ್ರಭಾಸ್ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಅತೀ ಸಣ್ಣ ವಯಸ್ಸಿನಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದ ನಟ ಪ್ರಭಾಸ್ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ.
ಆದರೆ ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ನಟನಿಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಫೇಮ್ ಅನ್ನು ಸಹ ತಂದು ಕೊಟ್ಟಿದೆ.
ಬಾಹುಬಲಿ ಸಿನಿಮಾ ಆದ ನಂತರ ನಟ ಪ್ರಭಾಸ್ ಅವರು ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಂಡಿದ್ದು, ಸೂಪರ್ ಡೂಪರ್ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ.
ನಟ ಪ್ರಭಾಸ್ ಅವರು ಎಷ್ಟೆ ಸಿನಿಮಾಗಳನ್ನು ಕಟ್ಟರು, ಇವರ ಅಭಿಮಾನಿಗಳಿಗಿರುವುದು ಒಂದೆ ಒಂದು ಆತಂಕ. ಅದು ಏನೆಂದರೆ, ನಟ ಯಾವಾಗ ಮದುವೆಯಾಗುತ್ತಾರೆ ಎಂಬುದು.
ನಟ ಪ್ರಭಾಸ್ ಅವರಿಗೆ ಈಗಾಗಲೆ 40ಕ್ಕಿಂತಲೂ ಹೆಚ್ಚು ವಯಸ್ಸಾಗಿದೆ. ಆದರೆ ನಟ ಮಾತ್ರ ಇನ್ನೂ ಕೂಡ ಮದುವೆಯಾಗುವ ಮನಸ್ಸು ಮಾಡಿಲ್ಲ, ಇದರಿಂದಾಗಿ ನಟನ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ..
ನಟ ಪ್ರಭಾಸ್ ಹಾಗೂ ಅನುಷ್ಕಾ ಇಬ್ಬರು ಕೂಡ ಪ್ರೀತಿಯಲ್ಲಿದ್ದಾರೆ, ಅವರು ಇಂದಲ್ಲಾ ನಾಳೆ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಿರುತ್ತದೆ, ಆದರೆ ಈ ವದಂತಿಗಳು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲವಾದರೂ, ಈ ಇಬ್ಬರು ಕೂಡ ಮದುವೆಯಾದರೆ ಜೋಡಿ ಚೆನ್ನಾಗಿರುತ್ತದೆ ಎಂಬುದು ಅಭಿಮಾನಿಗಳ ಆಸೆ.
ಇತ್ತ ನಟಿ ಅನುಷ್ಕಾ ಕೂಡ ಇನ್ನೂ ಮದುವೆಯಾಗದೆ ಸಿಂಗಲ್ ಆಗಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ನಟ ಪ್ರಭಾಸ್ ಅವರು ಮದುವೆ ಆಗುವ ಯೋಚನೆ ಯಾಕೆ ಮಡುತ್ತಿಲ್ಲ ಎನ್ನು ಪ್ರಶ್ನೆಗಳು ಕೇಳಿ ಬರುತ್ತಿದ್ದು, ಇದೀಗ ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ನಟ ಪ್ರಭಾಸ್ ಅವರಿಗೆ ಮದುವೆಯಾಗಲು ಇಷ್ಟವಿಲ್ಲ, ಅವರು ಮದುವೆಯಾಗುವುದಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ.
ಮತ್ತೊಂದೆಡೆ ನಟ ಪ್ರಭಾಸ್ ಮದುವೆಯಾಗೆ ಉಳಿಯಲು ಕಾರಣ ಒಬ್ಬರು ನಟಿ, ಪ್ರಭಾಸ್ ಅವರು ಒಬ್ಬ ನಟಿಯನ್ನು ಪ್ರೀತಿಸುತ್ತಿದ್ದು, ಇಬ್ಬರು ಜಾತಕದಲ್ಲಿ ಹೊಂದಾಣಿಕೆ ಇಲ್ಲದ ಕಾರಣದಿಂದಾಗಿ ನಟ ಮದುವೆಯಾಗುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಇದೀಗ ಕೇಳಿ ಬರುತ್ತಿದೆ.
ಇನ್ನೂ, ಈ ಕುರಿತಾಗಿ ಅಲ್ಲದೆ ಮದುವೆಯ ಕುರಿತಾಗಿ ಪ್ರಭಾಸ್ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಮುಂದೆ ನಟ ಮದುವೆಯಾಗುವ ನಿರ್ಧಾರ ಮಾಡುತ್ತಾರ ಅಥವಾ ಇಲ್ವಾ ಎಂಬುದನ್ನು ಇನ್ನು ಮೂಮದಷ್ಟೆ ಕಾದು ನೋಡಬೇಕಿದೆ.