Actor Ravichandran: ಸಾಕಷ್ಟು ಅವಕಾಶಗಳಿದ್ದರೂ ʼಈʼ ಒಂದು ಕಾರಣಕ್ಕೆ ಡಾ. ರಾಜ್‌ಕುಮಾರ್‌ ಅವರೊಂದಿಗೆ ನಟಿಸಲಿಲ್ಲವಂತೆ ರವಿಚಂದ್ರನ್‌!

Wed, 14 Aug 2024-5:36 pm,

80-90 ರ ದಶಕದಲ್ಲಿ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಪ್ರತಿಭಾನ್ವಿತ ನಟ-ನಟಿಯರು ಕಾಲಿಟ್ಟರು.. ಚಂದನವನವನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯುವಲ್ಲಿ ಈ ಕಾಲಘಟ್ಟದ ಕೊಡುಗೆ ಅಪಾರವಾಗಿದೆ..   

ಈ ಅವಧಿಯಲ್ಲಿ ಆಗಮಿಸಿದ ಕಲವಾಇದರು ತಮ್ಮ ಅಮೋಘ ಹಾಗೂ ಅದ್ಭುತ ನಟನೆಯ ಮೂಲಕ ಸಾಲು ಸಾಲು ಸಿನೊಮಾಗಳನ್ನು ನೀಡಿ ಗುರುತಿಸಿಕೊಂಡರು ಅದರಲ್ಲಿ ನಟ ರವಿಚಂದ್ರನ್‌ ಕೂಡಾ ಒಬ್ಬರು..     

ಸಾಕಷ್ಟು ಸ್ಟಾರ್‌ ನಟರೊಂದಿಗೆ ತೆರೆಹಂಚಿಕೊಂಡು ಮಿಂಚಿದ ನಟ ರವಿಚಂದ್ರನ್‌ ಡಾ. ರಾಜ್‌ಕುಮಾರ್‌ ಅವರೊಂದಿಗೆ ಸಾಕಷ್ಟು ಅವಕಾಶಗಳು ಬಂದರೂ ನಟಿಸಲಿಲ್ಲ.. ಹಾಗಾದರೆ ಯಾವ ಕಾರಣಕ್ಕೆ ನಟರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..     

ನಮಗೆಲ್ಲ ಗೊತ್ತಿರುವ ಹಾಗೇ ನಟ ರಾಜ್‌ಕುಮಾರ್‌ ಅವರನ್ನು ಬಿಟ್ಟು ರವಿಚಂದ್ರನ್‌ ಬಹುತೇಕ ಎಲ್ಲ ಕಲಾವಿದರೊಂಗಿಗೂ ತೆರೆಹಂಚಿಕೊಂಡಿದ್ದಾರೆ.. ವಿಷ್ಣುವರ್ಧನ್‌ ಜೊತೆಗಿನ ಜೋಡಿಯಂತೂ ಅಭಿಮಾನಿಗಳಲ್ಲಿ ಮೋಡಿ ಮಾಡಿತ್ತು..     

ನಟ ರವಿಚಂದ್ರನ್‌ ಎಲ್ಲ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡರೂ ಅಣ್ಣಾವ್ರೊಂದಿಗೆ ಮಾತ್ರ ನಟಿಸುವ ಸುಯೋಗ ಅವರಿಗೆ ಕೂಡಿ ಬರಲೇ ಇಲ್ಲ..    

ಹೌದು ರವಿಚಂದ್ರನ್‌ ಅವರು ಡಾ. ರಾಜ್‌ಕುಮಾರ್‌ ಅವರೊಂದಿಗೆ ಬಾಲನಟನಾಗಿ ನಟಿಸಿದ್ದರು.. ಆದರೆ ಸ್ಟಾರ್‌ ನಟನಾಗಿ ಬೆಳೆದ ಮೇಲೆ ಅವರೊಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ರವಿಮಾಮ ಇಂದಿಗೂ ವಿಷಾದ ವ್ಯಕ್ತಪಡಿಸುತ್ತಿರುತ್ತಾರೆ..     

ವಾಸ್ತವವಾಗಿ ಇದಕ್ಕೆ ಮುಖ್ಯ ಕಾರಣವೆಂದರೇ ನಟ ರವಿಚಂದ್ರನ್‌ ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ..   

ಹಾಗೇ ಡಾ. ರಾಜ್‌ಕುಮಾರ್‌ ಅವರು ಸಹ ಆ ಕಾಲದಲ್ಲಿ ಉತ್ತುಂಗದಲ್ಲಿದ್ದರು.. ಹೀಗಾಗಿ ಇಬ್ಬರಿಗೂ ಒಟ್ಟಿಗೆ ನಟಿಸುವಂತಹ ಸಿನಿಮಾಗಳು ಅವರಿಗೆ ಒಲಿದು ಬರಲೇ ಇಲ್ಲವಂತೆ..     

ZEENEWS TRENDING STORIES

By continuing to use the site, you agree to the use of cookies. You can find out more by Tapping this link