ಒಂದೇ ತಿಂಗಳಲ್ಲಿ 5 ಕಿಲೋ ತೂಕ ಕಳೆದುಕೊಳ್ಳುವುದು ಗ್ಯಾರಂಟಿ ! ಈ ಸಿಂಪಲ್ ಟಿಪ್ಸ್ ಅನುಸರಿಸಿದರೆ ಸಾಕು
ಕ್ಯಾಲೋರಿ ಭರಿತ ಆಹಾರಗಳನ್ನು ಕಡಿಮೆ ಮಾಡಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಗಳು ಮತ್ತು ಧಾನ್ಯಗಳ ಸೇವನೆಯನ್ನು ಹೆಚ್ಚಿಸಬೇಕು. ಈ ಆಹರ ಪದಾರ್ಥಗಳಲ್ಲಿ ಕಡಿಮೆ ಕ್ಯಾಲೋರಿ ಇರುವುದು ಮಾತ್ರವಲ್ಲದೆ, ಇದು ದೇಹಕ್ಕೆ ಬೇಕಾಗುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ.
ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಆಹಾರದಲ್ಲಿ ಏನು ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಅಲ್ಲದೆ ಯಾವ ಆಹಾರವನ್ನು ಎಷ್ಟು ತಿನ್ನುತ್ತೇವೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಂಡು ಯಾವುದೇ ಕಾರಣಕ್ಕೂ ಆಹಾರ ಸೇವಿಸಬೇಡಿ.
ನಿಮ್ಮ ಯೋಜನೆಯಲ್ಲಿ ಏರೋಬಿಕ್ ವ್ಯಾಯಾಮವನ್ನು ಸೇರಿಸಿ. ವಾರದಲ್ಲಿ ಎರಡು ದಿನ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮ (ಬ್ರಿಸ್ಕ್ ವಾಕ್ ಮತ್ತು ಸೈಕ್ಲಿಂಗ್) ಮಾಡಿ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ದಿನವಿಡೀ ನೀರು ಅಥವಾ ಗಿಡಮೂಲಿಕೆ ಚಹಾವನ್ನು ಕುಡಿಯಿರಿ. ಅನೇಕ ಬಾರಿ ಬಾಯಾರಿಕೆಯಾದಾಗಲೂ ನಾವು ಏನನ್ನಾದರೂ ತಿನ್ನಲು ಶುರು ಮಾಡುತ್ತೇವೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ.
ಪ್ಯಾಕೇಜ್ ಮಾಡಿದ ಆಹಾರ, ಸಿಹಿ ತಿಂಡಿಗಳು ಮತ್ತು ಸಕ್ಕರೆ ಪಾನೀಯಗಳ ಬಳಕೆಯನ್ನು ಕಡಿಮೆ ಮಾಡಿ. ಇವುಗಳಲ್ಲಿ ಕಡಿಮೆ ಪೋಷಣೆ ಮತ್ತು ಹೆಚ್ಚಿನ ಕ್ಯಾಲೋರಿಗಳಿರುತ್ತವೆ.
ಒಳ್ಳೆಯ ನಿದ್ರೆ ಮಾಡಿ.ನಿದ್ರೆಯ ಕೊರತೆಯು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗಬಹುದು, ಇದು ಅನಾರೋಗ್ಯಕರ ಆಹಾರವನ್ನು ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ. ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಹೊಂದಿಸಿ ಮತ್ತು ಪ್ರತಿ ರಾತ್ರಿ 7-9 ಗಂಟೆಗಳ ಕಾಲ ಮಲಗಲು ಪ್ರಯತ್ನಿಸಿ.