Relationships Tips: ಗಂಡ-ಹೆಂಡ್ತಿ ಸಂಬಂಧ ಗಟ್ಟಿಯಾಗಿರಬೇಕಂದ್ರೆ ಈ ಸಿಂಪಲ್ ಟಿಪ್ಸ್ ಪಾಲಿಸಿ!
ನಿಮ್ಮ ಸಂಗಾತಿಗೆ ಆಗಾಗ ಮೆಚ್ಚುಗೆ ವ್ಯಕ್ತಪಡಿಸವ ಅಭ್ಯಾಸ ಮಾಡಿಕೊಳ್ಳಿರಿ. ಅವರಿಗೆ ಬೆಂಬಲ ವ್ಯಕ್ತಪಡಿಸುವುದು, ಕಾಫಿ ಮಾಡುವುದು, ಮಹತ್ವದ ಕಾರ್ಯಗಳನ್ನು ಗುರುತಿಸುವುದು ಅಥವಾ ಕಷ್ಟದ ಸಮಯದಲ್ಲಿ ನೆರವಿಗೆ ನಿಲ್ಲುವುದು ಮುಂತಾದ ವಿಧಾನದಲ್ಲಿ ಮೆಚ್ಚುಗೆ ವ್ಯಕ್ತಪಡಿಸುವುದಾಗಿದೆ. ನಿಮ್ಮ ಸಂಗಾತಿಯ ಪ್ರಯತ್ನಗಳಿಗೆ ಪ್ರಶಂಸೆ ವ್ಯಕ್ತಪಡಿಸಿ. ಇದರಿಂದ ಅವರು ನಿಮ್ಮ ಬದುಕಿನಲ್ಲಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಎಂದು ಅರಿತುಕೊಳ್ಳಲು ಸಹಕಾರಿಯಾಗಲಿದೆ.
ನಿಮ್ಮ ಸಂಗಾತಿಗೆ ಹೃತ್ಪೂರ್ವಕ ಪತ್ರ ಬರೆಯಲು ಸಮಯ ಮೀಸಲಿಡಿ. ಅವರಲ್ಲಿ ನೀವು ಮೆಚ್ಚುವ ಗುಣ ಮತ್ತು ಕೃತಜ್ಞರಾಗಿರುವ ಕ್ಷಣಗಳನ್ನು ಮೆನ್ಶನ್ ಮಾಡಿ. ಈ ಚಿಂತನಶೀಲ ವಿಧಾನವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಬಲ ಮಾರ್ಗವಾಗಿದೆ. ಈ ಸಣ್ಣ ಟಿಪ್ಪಣಿ ಸಹ ನಿಮ್ಮ ಸಂಗಾತಿಯ ದಿನವನ್ನು ಅದ್ಭುತವಾಗಿಸುತ್ತವೆ. ಮತ್ತಷ್ಟು ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಬೆಳೆಯಲು ಕಾರಣವಾಗುತ್ತದೆ.
ಜಗಳ ಅಥವಾ ಒತ್ತಡದ ಅವಧಿಗಳಲ್ಲಿ ಯಾವುದು ತಪ್ಪಾಗಿದೆ ಎಂಬುದರ ಮೇಲೆ ಕೇಂದ್ರೀಕರಿಸುವುದು ಸುಲಭ. ಇದರ ಬದಲು ನಿಮ್ಮ ಗಮನವನ್ನು ಸಂಬಂಧದ ಸಕಾರಾತ್ಮಕ ಅಂಶಗಳಿಗೆ ವರ್ಗಾಯಿಸಲು ಪ್ರಯತ್ನಿಸಿರಿ. ನಿಮ್ಮ ಸಂಗಾತಿ ಏನು ತಪ್ಪು ಮಾಡುತ್ತಾರೆ ಎಂಬುದರ ಬದಲಿಗೆ ಅವರು ಏನು ಒಳ್ಳೆಯದು ಮಾಡುತ್ತಾರೆ ಅನ್ನೋದನ್ನು ಗಮನಿಸಿ. ಇದು ಸಮತೋಲಿತ ದೃಷ್ಟಿಕೋನ ಕಾಪಾಡಿಕೊಳ್ಳಲು & ಹತಾಶೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಸಂಬಂಧದಲ್ಲಿ ವಿಶೇಷ ದಿನಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಅವುಗಳನ್ನು ಸಂಭ್ರಮಿಸಬೇಕು. ಇವುಗಳನ್ನು ಆಚರಿಸಲು ಸಮಯ ತೆಗೆದುಕೊಳ್ಳಬೇಕು. ಇದು ವಾರ್ಷಿಕೋತ್ಸವವಾಗಲಿ, ಉದ್ಯೋಗದ ಪ್ರಮೋಷನ್ ಆಗಿರಲಿ ಅಥವಾ ಒಳ್ಳೆಯ ದಿನವಾಗಲಿ. ಈ ಸುಂದರ ಕ್ಷಣಗಳನ್ನು ಆಚರಿಸುವುದು ನಿಮ್ಮ ಸಂತೋಷವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಇದಲ್ಲದೇ ನಿಮ್ಮಿಬ್ಬರ ಸಂಬಂಧವನ್ನು ಬಲಪಡಿಸುತ್ತದೆ.
ನಿಮ್ಮ ಸಂಗಾತಿ ಮಾತನಾಡುವಾಗ ಸಂಪೂರ್ಣ ಗಮನವನ್ನು ಅವರಿಗೆ ನೀಡಿ. ಎಚ್ಚರಿಕೆಯಿಂದ ಆಲಿಸುವುದನ್ನು ಅಭ್ಯಾಸ ಮಾಡುವುದು ಅವರ ಆಲೋಚನೆಗಳು ಮತ್ತು ಭಾವನೆಗಳಿಗೆ ಗೌರವ ಹಾಗೂ ಮೆಚ್ಚುಗೆ ತೋರಿಸುತ್ತದೆ. ಈ ಸರಳ ಅಭ್ಯಾಸವು ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಂಡಂತೆ ಮತ್ತು ಮೌಲ್ಯಯುತವಾಗಿ ಭಾವಿಸುವಂತೆ ಮಾಡುತ್ತದೆ. ಇದು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ನಿಮ್ಮ ಬಗ್ಗೆಯೂ ಅವರಿಗೆ ಗೌರವ ಹೆಚ್ಚಾಗುವಂತೆ ಮಾಡುತ್ತದೆ.