ಮೊಬೈಲ್ ಬಳಕೆದಾರರಿಗೆ Reliance Jio ಶಾಕ್..! ಇನ್ನು ಚಾಲ್ತಿಯಲ್ಲಿರುವುದಿಲ್ಲ 4 ಅಗ್ಗದ ರಿಚಾರ್ಜ್ ಪ್ಲಾನ್..!
ಟೆಕ್ ಸೈಟ್ telecomtalk ವರದಿಯ ಪ್ರಕಾರ ಜಿಯೋ ತನ್ನ ಅಗ್ಗದ ನಾಲ್ಕು ರಿಚಾರ್ಜ್ ಯೋಜನೆಗಳನ್ನು (Recharge Plan) ನಿಲ್ಲಿಸಿದೆ. ಅನಿರ್ದಿಷ್ಟ ಕರೆಗಳ ಯೋಜನೆಯನ್ನು ಆರಂಭಿಸುವ ಸಲುವಾಗಿಯೇ ಈ ನಾಲ್ಕು ಪ್ಲಾನ್ ಗಳನ್ನು ನಿಲ್ಲಿಸಲಾಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಜಿಯೋ ಗ್ರಾಹಕರು ಜಿಯೋನೆಟ್ ವರ್ಕ್ ಹೊಂದಿದ ನಂಬರ್ ಗೆ ಮಾತ್ರ ಉಚಿತ ಕರೆಗಳನ್ನು ಮಾಡಬಹುದಾಗಿತ್ತು.
ಮೂಲಗಳ ಪ್ರಕಾರ ಇನ್ನು ಮುಂದೆ 99 ರೂಪಾಯಿ, 153 ರೂ. 297 ರೂ ಮತ್ತು 594 ರೂಪಾಯಿಗಳ ರಿಚಾರ್ಜ್ ಯೋಜನೆಗಳನ್ನು ನಿಲ್ಲಿಸಲು ನಿರ್ಧರಿಸಲಾಗಿದೆ.
ಜೊಯೋ ತನ್ನ ಗ್ರಾಹಕರಿಗೆ 75ರೂ. 125 ರೂ, 155ರೂ ಮತ್ತು 185ರೂಗಳ ರಿಚಾರ್ಜ್ ಸೇವೆಯನ್ನು ಒದಗಿಸಿದೆ. ಈ ನಾಲ್ಕೂ ಪ್ಲಾನ್ All-in-One ಯೋಜನೆಯಡಿಯಲ್ಲಿ ಲಭ್ಯವಿರುತ್ತದೆ. ಅಂದರೆ ಜಿಯೋ ಗ್ರಾಹಕರು ಇನ್ನು ಮುಂದೆ ಯಾವ ನೆಟ್ ವರ್ಕ್ ಜೊತೆ ಬೇಕಾದರೂ ಅನಿರ್ದಿಷ್ಟ ಕರೆಗಳ ಆನಂದವನ್ನುಅನುಭವಿಸಬಹುದು.
ಈ ಹೊಸ ಟ್ಯಾರಿಫ್ ನಲ್ಲಿ ಡೆಟಾ ಕೂಡಾ ಲಭ್ಯವಾಗಲಿದೆ. 75 ರೂ ರೀಚಾರ್ಜ್ ಮಾಡಿದರೆ 0.1GB ಡೇಟಾ ಸಿಗಲಿದೆ. 125 ರೂ ರಿಚಾರ್ಜ್ ಮಾಡಿದರೆ 0.5GB ಡೇಟಾ ,155ರೂಗಳಿಗೆ 1GBಡೇಟಾ ಮತ್ತು 188 ರೂಗಳಿಗೆ 2GB ಡೇಟಾ ಸಿಗಲಿದೆ.
ಮೂಲಗಳ ಪ್ರಕಾರ 153 ರೂ ಪ್ಲಾನ್ ಬದಲಿಗೆ 155ರೂ ರೀಚಾರ್ಜ ಪ್ಲಾನ್ ಒದಗಿಸಲಾಗಿದೆ. ಈ ಪ್ಲಾನ್ ಅನ್ವಯ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಸಿಗಲಿದೆ. ಇಲ್ಲಿಯವರೆಗೆ 153ರೂ ರಿಚಾರ್ಜ್ ಮಾಡಿದರೆ 1.5 GB ಡೇಟಾ ಸಿಗುತ್ತಿತ್ತು.