Reliance Jio New Plan: ಕೇವಲ 51 ರೂ.ಗೆ ಅನಿಯಮಿತ 5G ಡೇಟಾ!

Sun, 07 Jul 2024-1:15 pm,

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 3 ಹೊಸ 5G ಡೇಟಾ ಬೂಸ್ಟರ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. 6GB ಡೇಟಾ ಜೊತೆಗೆ ಅನಿಯಮಿತ 5G ನೀಡುವ 61 ರೂ.ನ ಡೇಟಾ ಬೂಸ್ಟರ್ ಯೋಜನೆ ಗ್ರಾಹಕರಿಗೆ ಇಷ್ಟವಾಗುತ್ತದೆ. ಇದು ಮಾತ್ರವಲ್ಲದೇ 101 ರೂ. ಮತ್ತು 151 ರೂ.ನ ಯೋಜನೆಗಳನ್ನೂ ಪರಿಚಯಿಸಿದೆ. ಈ 3 ರಿಚಾರ್ಜ್‌ ಪ್ಯಾಕ್‌ಗಳು ಹೊಸ ಯೋಜನೆಗಳು ಅಷ್ಟೇ.  

5G ನೆಟ್‌ವರ್ಕ್‌ ಅನ್ನು ನೀವು ಬಯಸಿದರೆ ಈ ಯೋಜನೆಗಳನ್ನು ಬಳಸಿಕೊಂಡು ಜಿಯೋದಿಂದ ಬಿಡುಗಡೆ ಆಗಿರುವ ಪ್ರಿಪೇಯ್ಡ್ ಯೋಜನೆಗಳನ್ನು ರಿಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಆದರೆ ಸದ್ಯ ಜಾರಿಯಲ್ಲಿರುವ 479 ರೂ. ಮತ್ತು 1,899 ರೂ. ಯೋಜನೆಗಳಲ್ಲಿ ಹೊಸ ಯೋಜನೆ ಕಾರ್ಯನಿರ್ವಹಿಸುವುದಿಲ್ಲ.

ರಿಲಯನ್ಸ್ ಜಿಯೋದ 51 ರೂ. ಯೋಜನೆಯು ಅನಿಯಮಿತ 5G & 3GBಯ 4G ಡೇಟಾದೊಂದಿಗೆ ಬರುತ್ತದೆ. ಇದರ ವ್ಯಾಲಿಡಿಟಿಯು ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. 1.5GB/ದಿನದ ಯೋಜನೆ & 1 ತಿಂಗಳ ವ್ಯಾಲಿಡಿಟಿ ಹೊಂದಿರುವ ಬಳಕೆದಾರರು ಜಿಯೋದಿಂದ 5G ಪಡೆಯಲು 51 ರೂ. ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು.

ಜಿಯೋದ 101 ರೂ. ಯೋಜನೆಯು 6GBಯ 4G ಡೇಟಾ ಮತ್ತು ಅನಿಯಮಿತ 5Gಯೊಂದಿಗೆ ಬರುತ್ತದೆ. ಇದರ ವ್ಯಾಲಿಡಿಟಿ ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. ಆದರೆ ಈ ಯೋಜನೆಯು 1GB ದೈನಂದಿನ ಡೇಟಾ ಯೋಜನೆ ಅಥವಾ 1.5GB ದೈನಂದಿನ ಡೇಟಾ ಯೋಜನೆ ಹೊಂದಿರುವ ಬಳಕೆದಾರರಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಇದು 1 ತಿಂಗಳಿಗಿಂತ ಹೆಚ್ಚು ಆದರೆ 2 ತಿಂಗಳಿಗಿಂತ ಕಡಿಮೆ ಅಥವಾ ಸಮಾನವಾಗಿರುತ್ತದೆ.

ಜಿಯೋದ 151 ರೂ. ಆಡ್-ಆನ್ ಯೋಜನೆಯೊಂದಿಗೆ ಬಳಕೆದಾರರು ಅನಿಯಮಿತ 5G ಜೊತೆಗೆ 9GB 4G ಡೇಟಾ ಪಡೆಯುತ್ತಾರೆ. ಇದರ ವ್ಯಾಲಿಡಿಟಿಯು ಬಳಕೆದಾರರ ಮೂಲ ಸಕ್ರಿಯ ಯೋಜನೆಯಂತೆಯೇ ಇರುತ್ತದೆ. ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದಾದ ಬಳಕೆದಾರರು 2 ತಿಂಗಳಿಗಿಂತ ಹೆಚ್ಚು 1.5GB ದೈನಂದಿನ ಡೇಟಾ ಯೋಜನೆ ಹೊಂದಿರುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link