ನಿಮ್ಮ ಬಳಿ ಈ ಐದು ಹಳೆಯ ಗ್ಯಾಜೆಟ್‌ಗಳಿದ್ದರೆ ತಕ್ಷಣ ಮನೆಯಿಂದ ಹೊರ ಹಾಕಿ.!
ಹಳೆಯ ವೈಫೈ ರೂಟರ್‌ಗಳ ಸಹಾಯದಿಂದ, ಸೈಬರ್ ಅಪರಾಧಿಗಳು ನಿಮ್ಮ ಹಣಕಾಸಿನ ಮಾಹಿತಿಯನ್ನು ಹ್ಯಾಕ್ ಮಾಡಬಹುದು. ಇದು ಅತ್ಯಂತ ಅಪಾಯಕಾರಿಯಾಗಿದೆ.
ಮನೆಯಲ್ಲಿರುವ ಮುರಿದ ಸಾಕೆಟ್ ಗಳು ಕೂಡಾ ಬಹಳ ಅಪಾಯಕಾರಿಯಾಗಿದೆ. ಇವುಗಳಿಂದ ವಿದ್ಯುತ್ ಆವಘಡದ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಸರಿಪಡಿಸಬೇಕು ಅಥವಾ ತೆಗೆದುಹಾಕಬೇಕು.
ಹಳೆಯದಾದ ವಿದ್ಯುತ್ ಕೇಬಲ್ ಗಳು ಅಪಾಯಕಾರಿಯಾಗಬಹುದು. ಇವು ಆಘಾತ, ಅಥವಾ ಬೆಂಕಿಯ ಅಪಘಾತಗಳಿಗೆ ಕಾರಣವಾಗಬಹುದು.
ಎಲ್ಲರ ಮನೆಯಲ್ಲೂ ಹಳೆಯ ಫೋನ್‌ಗಳ ಸಂಗ್ರಹವಿರುತ್ತದೆ. ಫೋನ್‌ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿದ್ದು ಅದು ಕಾಲಾನಂತರದಲ್ಲಿ ಊದಿಕೊಂಡು, ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಇಯರ್‌ಫೋನ್‌ಗಳು ಮತ್ತು ಸ್ಪೀಕರ್‌ಗಳು ಮ್ಯಾಗ್ನೆಟ್‌ಗಳು, ತಾಮ್ರದ ಸುರುಳಿಗಳು, ಪ್ಲಾಸ್ಟಿಕ್‌ಗಳು ಮತ್ತು ಬ್ಯಾಟರಿಗಳಂತಹ ಬಹಳಷ್ಟು ಅಪಾಯಕಾರಿ ವಸ್ತುಗಳನ್ನು ಒಳಗೊಂಡಿರುತ್ತವೆ. ದೀರ್ಘಾವಧಿಯಲ್ಲಿ, ಈ ವಸ್ತುಗಳು ಸಾಕಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು.