ಅನುಷ್ಕಾ ಜೊತೆ ಮದುವೆಗೆ ಮೊದಲು ಈ 6 ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದ್ರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಸ್ಟಾರ್ ಹೀರೋಯಿನ್..!?
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಗೂ ಮುನ್ನ ಲವ್ ಅಫೇರ್, ಡೇಟಿಂಗ್ ವಿಚಾರದಿಂದಲೇ ಭಾರೀ ಸುದ್ದಿಯಲ್ಲಿದ್ದರು. ಅಂದಹಾಗೆ ಅನುಷ್ಕಾ ಜೊತೆಗಿನ ಪ್ರೇಮ ಜೀವನಕ್ಕೂ ಮುನ್ನ ಕೆಲ ನಟಿಯರ ಜೊತೆ ವಿರಾಟ್ ಪ್ರೀತಿಯಲ್ಲಿ ಬಿದ್ದಿದ್ದರು ಎಂದು ವರದಿಗಳು ಹೇಳುತ್ತವೆ.
ಈ ವರದಿಯ ಪ್ರಕಾರ, ಕೆಲ ನಟಿಯರು ವಿರಾಟ್ ಜೊತೆ ಡೇಟಿಂಗ್ ಮಾಡಿರುವುದು ನಿಜವೆಂದು ಒಪ್ಪಿಕೊಂಡಿದ್ದರೆ, ಇನ್ನೂ ಕೆಲವರು ತಿರಸ್ಕರಿಸಿದ್ದಾರೆ. ಅದರಲ್ಲಿ ಒಬ್ಬರು ಕನ್ನಡದ ಹೆಸರಾಂತ ನಟಿ ಸಂಜನಾ ಗಲ್ರಾನಿ.
ಬ್ರೆಜಿಲ್ ರೂಪದರ್ಶಿ ಇಸಾಬೆಲಿ ಲೇಟಿ ಜೊತೆಗೆ ವಿರಾಟ್ ಕೊಹ್ಲಿ ಸಂಬಂಧ ಹೊಂದಿದ್ದರು ಎಂಬ ವದಂತಿ ಹರಡಿತ್ತು. ಈ ಬಗ್ಗೆ ಸ್ವತಃ ನಟಿಯೇ ಹೇಳಿಕೆ ನೀಡಿದ್ದರು. 2014 ರಲ್ಲಿ, ಇಸಾಬೆಲಿ ಲೀಟಿ ಸಂದರ್ಶನವೊಂದರಲ್ಲಿ ತಾನು ಮತ್ತು ವಿರಾಟ್ ಸುಮಾರು 2 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದೇವೆ ಎಂದು ಹೇಳಿದ್ದರು.
ಇನ್ನು ಇದಕ್ಕೂ ಮೊದಲು ಅಂದರೆ 2007ರಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದ ಸಾರಾ ಜೇನ್ ಡೈಸ್ ಹೆಸರು ಕೂಡ ವಿರಾಟ್ ಕೊಹ್ಲಿ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ. ಇನ್ನು ಕೆಲ ವರದಿಗಳ ಪ್ರಕಾರ, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಇವರು ಬ್ರೇಕಪ್ ಮಾಡಿಕೊಂಡಿದ್ದರು.
ಬಾಲಿವುಡ್ ನಟಿ ತಮನ್ನಾ ಭಾಟಿಯಾ ಜೊತೆಯೂ ವಿರಾಟ್ ಕೊಹ್ಲಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. 2012 ರ ಕೊನೆಯಲ್ಲಿ, ಇಬ್ಬರ ನಡುವೆ ಉತ್ತಮ ಸ್ನೇಹ ಕಂಡುಬಂದಿತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ. ಬಾಲಿವುಡ್ ನಟಿ ತಮನ್ನಾ ಭಾಟಿಯಾ ಜೊತೆಯೂ ವಿರಾಟ್ ಕೊಹ್ಲಿ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. 2012 ರ ಕೊನೆಯಲ್ಲಿ, ಇಬ್ಬರ ನಡುವೆ ಉತ್ತಮ ಸ್ನೇಹ ಕಂಡುಬಂದಿತು. ಆದರೆ, ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ.
ವಿರಾಟ್ ಕೊಹ್ಲಿ ಖ್ಯಾತಿಯ ಉತ್ತುಂಗಕ್ಕೇರಿದಾಗ ಅವರ ಜೊತೆ ತಳುಕು ಹಾಕಿದ ಮತ್ತೊಂದು ನಟಿಯ ಹೆಸರೇ ಸಾಕ್ಷಿ ಅಗರ್ವಾಲ್. ಈಕೆ ತಮಿಳು ನಟಿ. ಸಾಕಷ್ಟು ಸಮಯ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಕಾರಣಾಂತರಗಳಿಂದ ಇಬ್ಬರ ನಡುವಿನ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಇನ್ನು ಕೆಲ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಕನ್ನಡ ಚಿತ್ರರಂಗದ ನಟಿ ಸಂಜನಾರನ್ನು ಪಾರ್ಟಿಯಲ್ಲಿ ಭೇಟಿಯಾಗಿದ್ದರು. 2009 ರಲ್ಲಿ, ಇಬ್ಬರ ನಡುವಿನ ಸಂಬಂಧದ ಬಗ್ಗೆ ಅನೇಕ ಸುದ್ದಿಗಳು ಬೆಳಕಿಗೆ ಬಂದವು. ಆದರೆ ಆ ಸಮಯದಲ್ಲಿ ಸ್ಪಷ್ಟನೆ ನೀಡಿದ ನಟಿ ಸಂಜನಾ, ಕೊಹ್ಲಿಯೊಂದಿಗಿನ ಸಂಬಂಧವನ್ನು ನಿರಾಕರಿಸಿದ್ದಲ್ಲದೆ, ನಮ್ಮಿಬ್ಬರ ಮಧ್ಯೆ ಸ್ನೇಹವಷ್ಟೇ ಇರುವುದಾಗಿ ಹೇಳಿಕೆ ನೀಡಿದ್ದರು.
ಒಂದೊಮ್ಮೆ ವಿರಾಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಿತಿಕಾ ಸಜ್ದೇಹ್ ಜೊತೆಗೂ ವಿರಾಟ್ ಕೊಹ್ಲಿ ಮೂವಿ ಡೇಟ್ ಹೋಗಿದ್ದರು ಎಂದು ವರದಿಗಳು ಹರಿದಾಡಿದ್ದವು. ಆದರೆ ಆ ಬಳಿಕ ರಿತಿಕಾ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾರನ್ನು ಮದುವೆಯಾದರು.