Republic Day 2021: ರಾಜಪಥವಲ್ಲ..! ಇದು ಭಾರತದ ಗಗನ ಪಥ !

Tue, 26 Jan 2021-1:51 pm,

ರಾಜಪಥದಲ್ಲಿ ಭಾರತದ ಶಕ್ತಿ ಸಾಮರ್ಥ್ಯವನ್ನು ಅನಾವರಣಗೊಳಿಸುವ ಹಲವು ಟ್ಯಾಬ್ಲೋಗಳು, ಯುದ್ದಟ್ಯಾಂಕ್ ಗಳು, ಸೇನಾ ತುಕಡಿಗಳು ಸಾಗಿದವು.  ಬ್ರಹ್ಮೋಸ್ ಸೇರಿದಂತೆ ಹಲವು ಯುದ್ದಾಸ್ತ್ರಗಳ ಪರಿಚಯವಾಯಿತು.  

 ನಭಂ ಸ್ಪರ್ಶಂ ದೀಪ್ತಂ..! ಇದು ವಾಯುಪಡೆಯ ಧ್ಯೇಯವಾಕ್ಯ. ಇದನ್ನು ಕಂಗೊಳಿಸುವಂತೆ ಹಾರಿದ್ದು ಈ ಸಿಂಗಲ್ ರಾಫೇಲ್.  ಪ್ರತಿಗಂಟೆಗೆ 900 ಕಿ.ಮೀ. ಸ್ಪೀಡ್ ನಲ್ಲಿ ನೇರ ಲಂಬಕೋನದಲ್ಲಿ ನಭಕ್ಕೆ ಚಿಮ್ಮಿ, ಅಚ್ಚರಿಯ ಸ್ಟಂಟ್ ಗಳನ್ನೂ ಮಾಡಿತು. ಸಿಂಗಲ್ ರಾಫೇಲ್ ತಾಕತ್ತಿನ ಪ್ರದರ್ಶನದೊಂದಿಗೆ ರಾಜಪಥ ಪರೇಡ್ ಸಮಾಪನವಾಯಿತು.   

ಇದು ತ್ರಿನೇತ್ರ ಯುದ್ದ ವ್ಯೂಹ. ಅಂದರೆ ತ್ರಿನೇತ್ರ ಫಾರ್ಮೇಶನ್.  ಮೂರು ಸುಖೋಯ್ Su-30MKI ಯುದ್ಧ ವಿಮಾನಗಳು ಶಬ್ದಾತೀತ ವೇಗದಲ್ಲಿ ಚಿಮ್ಮಿ ಆಕಾಶದಲ್ಲಿ ತ್ರಿಶೂಲ, ಅಂದರೆ ಮೂರು ಮಾರ್ಗಗಳ ರಚನೆ ಮಾಡಿ ಮರೆಯಾದವು. 

ಇದು ಏಕಲವ್ಯ ವ್ಯೂಹ..!ಅಂದರೆ ಏಕಲವ್ಯ ಫಾರ್ಮೇಶನ್. ಒಂದು ರಾಫೇಲ್ ಫೈಟರ್,  ಎರಡು ಜಗ್ವಾರ್ ಸ್ಟ್ರೈಕ್ ಫೈಟರ್, ಎರಡು ಮಿಗ್ 29 ಏರ್ ಸೂಪಿರಿಯೋರಿಟಿ ಫೈಟರ್ ಸೇರಿ ಏಕಲವ್ಯ ವ್ಯೂಹ ರಚಿಸಿದ್ದವು.  ರಾಜಪಥದಿಂದ ಕೇವಲ 300 ಮೀಟರ್ ಎತ್ತರದಲ್ಲಿ ಪ್ರತಿಗಂಟೆಗೆ 780 ಕಿ.ಮಿ. ವೇಗದಲ್ಲಿ ಈ ಯುದ್ಧವಿಮಾನ ವ್ಯೂಹಗಳು ಸಾಗಿದ್ದು ವಿಶೇಷ. 

ರುದ್ರ ವ್ಯೂಹ, ಅಂದರೆ ರುದ್ರ ಫಾರ್ಮೇಶನ್. ಇದರಲ್ಲಿ ಕಾಣಿಸಿಕೊಂಡಿದ್ದು ಅತ್ಯಾಧುನಿಕ ಯುದ್ಧ ವಿಮಾನವಲ್ಲ. ಡಕೋಟಾಸ್ ಎಂಬ ಹಳೆಯ ಸೂಪರ್ ಫೈಟರ್.  ಇದಕ್ಕೆ ಸಾಥ್ ಕೊಟ್ಟಿದ್ದು ಎರಡು Mi-17 IV ಹೆಲಿಕಾಪ್ಟರ್ಸ್ಸ.  ಡಕೋಟಾ ಫೈಟರ್ಸ್ ಗೆ ಇದೊಂದು ರೀತಿಯ ವಿಶಿಷ್ಠ ಗೌರವ. ಡಕೋಟಾ ಫೈಟರ್ಸ್ ದೇಶಕ್ಕೆ ಸಲ್ಲಿಸಿದ ಸೇವೆಯನ್ನು ನಾವಿಂದು ಹೇಳಲೇ ಬೇಕು. 1947ರ ಭಾರತ ಪಾಕ್ ಯುದ್ಧದಲ್ಲಿ ಈ ಡಕೋಟಾ ಸಲ್ಲಿಸಿದ ಸೇವೆ ಗಣನೀಯ. ಇನ್ನೇನು ಭಾರತಕ್ಕೆ ಹಿನ್ನಡೆಯಾಗುತ್ತೆ ಅನ್ನುವಾಗ ಡಕೋಟಾ ಫೈಟರ್ ದಾಳಿಗಿಳಿದಿತ್ತು. ಶತ್ರು ಸೈನ್ಯ ಕಾಶ್ಮೀರ ಕಣಿವೆಯಿಂದ  ಓಡಿಹೋಗಿತ್ತು. 1971ರ ಬಾಂಗ್ಲಾ ಯುದ್ಧದಲ್ಲೂ ಡಕೋಟ ಫೈಟರ್ಸ್ ವ್ಯೂಹಕ್ಕೆ ಪಾಕಿಸ್ತಾನ ನಿರುತ್ತರವಾಗಿಬಿಟ್ಟಿತ್ತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link