ಈ ರಾಶಿಯವರ ಜೀವನದಲ್ಲಿ ಧನವೃಷ್ಟಿ ! ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡುತ್ತಾನೆ ಗುರು
ಗುರುಗ್ರಹವು ಸೆಪ್ಟೆಂಬರ್ 4ರಿಂದ ತನ್ನ ನಡೆಯನ್ನು ಬದಲಿಸಲಿದ್ದಾನೆ. ಗುರುವಿನ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರಿಗೆ ಮಾತ್ರ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.
ಈ ಜನರ ಪ್ರತಿಯೊಂದು ಆಸೆಯನ್ನೂ ಗುರು ಈಡೇರಿಸುತ್ತಾನೆ. ಈ ಮೂರು ರಾಶಿಯವರು ಬಹಳಷ್ಟು ಸಂಪತ್ತು ಮತ್ತು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.
ಮೇಷ ರಾಶಿ : ಯಾವುದೇ ಹೊಸ ಯೋಜನೆ ಅಥವಾ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಅದೃಷ್ಟವು ನಿಮ್ಮ ಕಡೆ ಇರುತ್ತದೆ. ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯುತ್ತೀರಿ. ಹೆಚ್ಚಿನ ಹಣ ಗಳಿಕೆ ಸಾಧ್ಯವಾಗುತ್ತದೆ.
ಸಿಂಹ ರಾಶಿ: ಈ ರಾಶಿಯವರ ಮೇಲೆ ಹೆಚ್ಚಿನ ದಯೆ ಇರುತ್ತದೆ. ಹುದ್ದೆ-ಪ್ರತಿಷ್ಠೆ ಸಿಗುತ್ತದೆ. ಹಣಕಾಸಿನ ಲಾಭವಾಗುವುದು. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಪ್ರೇಮ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು.
ತುಲಾ ರಾಶಿ: ವೃತ್ತಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗುವುದು. ನಿಮ್ಮಲ್ಲಿರುವ ಧೈರ್ಯದಿಂದಲೇ ಎಲ್ಲವನ್ನೂ ಜಯಿಸುತ್ತೀರಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)