ವಿಚ್ಛೇದನ ಪಡೆದವನ ಜೊತೆ ನಟಿ ಅಫೇರ್‌.. ವಿಶ್ವ ಸುಂದರಿ ಜೊತೆ ಡೇಟಿಂಗ್‌ ಮಾಡುತ್ತಿದ್ದವನ ಜೊತೆ ಸ್ಟಾರ್‌ ನಟಿಯ ಚಾಟಿಂಗ್‌ ಶುರುವಾಗಿದ್ದೇಗೆ..?

Mon, 19 Aug 2024-9:54 am,

ಚಿತ್ರರಂಗದಲ್ಲಿ ಅಫೇರ್ಸ್ ಎಂಬುದು ಸಾಮಾನ್ಯ ಸಂಗತಿ. ಅದರಲ್ಲೂ ಬಾಲಿವುಡ್‌ನಲ್ಲಿ ಈ ರೀತಿಯ ಹಲವಾರು ಸುದ್ದಿ ಪ್ರತಿನಿತ್ಯ ಕೇಳಿ ಬರುತ್ತಿರುತ್ತವೆ. ಮದುವೆಯಾದ ಎರಡು ವರ್ಷಗಳ ನಂತರ, ಇಬ್ಬರ ನಡುವಿನ ಮನಸ್ತಾಪದಿಂದಾಗಿ ಪತಿಯಿಂದ ದೂರವಾಗಿದ್ದ ಸ್ಟಾರ್‌ ಇಂದು ಹಲವರೊಂದಿಗೆ ಡೇಟ್‌ ಮಾಡುತ್ತಾ ಸುದ್ದಿಯಲ್ಲಿದ್ದಾರೆ.

ಚಿತ್ರರಂಗದಲ್ಲಿ ಅಫೇರ್‌, ಲವ್‌ ಮತ್ತು ಬರೇಕಪ್‌ಗಳು ಸರ್ವೇ ಸಾಮಾನ್ಯ. ಅದರಲ್ಲೂ ಬಾಲಿವುಡ್‌ನಲ್ಲಿ ಇಂತಹ ಸುದ್ದಿಗಳಿಗೇನು ಕಡಿಮೆ ಇಲ್ಲ. ಆದರೆ ಇತ್ತೀಚೆಗೆ ತೆಲುಗು ಹೀರೋಹಿನ್‌ ಒಬ್ಬರು ಉದ್ಯಮಿಯೊಂದಿಗೆ ಡೇಟಿಂಗ್‌ ಮಾಡುವ ವಿಚಾರಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.  

ತೆಲುಗು ನಾಯಕಿ ಡೇಟಿಂಗ್ ಮಾಡುತ್ತಿರುವ ವ್ಯಕ್ತಿ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿರುವುದು ಇಲ್ಲಿನ ವಿಶೇಷ. ಇಲ್ಲಿ ಇನ್ನೊಂದು ಟ್ವಿಸ್ಟ್ ಏನೆಂದರೆ, ಮಾಜಿ ಬ್ಯೂಟಿ ಕ್ವೀನ್ ಜೊತೆ ಇವರಿಗೆ ಅಫೇರ್ ಇತ್ತು ಎಂಬುದು.  

ನಿಖಿಲ್ ಕಾಮತ್ ಒಬ್ಬ ಉದ್ಯಮಿಯಾಗಿದ್ದು. 2019 ರಲ್ಲಿ, ಈತ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಎರಡು ವರ್ಷಗಳ ನಂತರ, ಇಬ್ಬರ ನಡುವಿನ ಮನಸ್ತಾಪಗಳಿಂದಾಗಿ 2021 ರಲ್ಲಿ ಈ ಜೋಡಿ ಬೇರ್ಪಟ್ಟಿದ್ದರು.  

ಅದಾದ ಬಳಿಕ ಮಾನುಷಿ ಚಿಲ್ಲರ್ ಜತೆ ಕೆಲ ತಿಂಗಳು ಅಫೇರ್ ಇತ್ತು ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಅಷ್ಟೆ ಅಲ್ಲದೆ ಈ ಇಬ್ಬರೂ ಪಾರ್ಟಿ ಪಬ್‌ ಅಂತಾ ಸುತ್ತಾಡುತ್ತಾ ಹಲವು ಭಾರಿ ಕ್ಯಾಮರಾದ ಕಣ್ಣಿಗೆ ಸೆರೆ ಸಿಕ್ಕಿದ್ದರು.  

ಇದೀಗ ಈತ ಬಾಲಿವುಡ್‌ನ ಖ್ಯಾತ ನಟಿ ಸುಶಾಂತ್‌ ಸಿಂಗ್‌ ಅವರ ಮಾಜಿ ಗೆಳತಿ ರಿಯಾ ಚಕ್ರಬೊರ್ತಿ ಅವರ ಜೊತೆಗೂ ಅಫೇರ್‌ ಹೊಂದಿದ್ದಾನೆ ಎನ್ನುವ ಸುದ್ದಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.  

ರಿಯಾ ಚಕ್ರವರ್ತಿ ಸುಮಂತ್ ಅಶ್ವಿನ್ ಅಭಿನಯದ ತೂನಿಗ ತೂನಿಗ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರ ನಂತರ, ಅವರು ಬಾಲಿವುಡ್‌ಗೆ ಹಾರಿದ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾದರು.   

ಅದರ ನಂತರ, ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್ ಮಾಡಿತ್ತಿದ್ದ ಅವರು, ಸುಶಾಂತ್‌ ಅವರ ಸಡನ್‌ ಸಾವಿನಿಂದ ಅವರ ಸಾವಿಗೆ ಈಕೆಯ ಕಾರಣ ಎಂಬ ಟೀಕೆಗೆ ಗುರಿಯಾಗಿದ್ದರು.  

ಸದ್ಯ ಈ ಚೆಲುವೆ ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.   

ಅದರ ಜೊತೆಗೆ ಇತ್ತೀಚೆಗೆ ಈ ಚೆಲುವೆ ಅವರ ಜೊತೆ ಬೈಕ್ ರೈಡ್ ಹೋಗಿದ್ದು ಕಂಡುಬಂದಿದ್ದು, ಈ ಹಿಂದೆ ಹಲವು ಬಾರಿ ಅವನೊಂದಿಗೆ ಹಲವು ಪಾರ್ಟಿಗಳಿಗೆ ಹೋಗಿರುವುದು ಗೊತ್ತಾಗಿದೆ. ಇವರಿಬ್ಬರು ಡೇಟಿಂಗ್ ಮಾಡುತ್ತಿರುವುದು ಖಚಿತವಾಗಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link