ಸುಶಾಂತ್ ಸಿಂಗ್ ಪುಣ್ಯಸ್ಮರಣೆ: “Miss you every day…” ರಿಯಾ ಚಕ್ರವರ್ತಿ ಭಾವುಕ ಪೋಸ್ಟ್‌

Tue, 14 Jun 2022-6:00 pm,

ನೀವು ನಮ್ಮೆಲ್ಲರನ್ನ ಅಗಲಿ ಎರಡು ವರ್ಷಗಳಾಗಿವೆ. ಜೀವನದ ನಿಮ್ಮ ಮೌಲ್ಯಗಳಿಂದ ನೀವು ಅಮರರಾಗಿದ್ದೀರಿ. ನಿಮ್ಮ ಬದುಕಿನ ಆದರ್ಶಗಳನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಬೇರೋಬ್ಬರ ಮುಖದಲ್ಲಿ ನಗು ತರಲು ನಿಸ್ವಾರ್ಥದಿಂದ ಕೆಲಸ ಮಾಡೋಣ ಎಂದು ಸುಶಾಂತ್‌ ಸಹೋದರಿ ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 

ಸುಶಾಂತ್ ಜೊತೆ ಇರುವ ಫೋಟೋಗಳನ್ನ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ ರಿಯಾ ಚಕ್ರವರ್ತಿ. ರಿಯಾ ಚಕ್ರವರ್ತಿ ತಮ್ಮ ಮಾಜಿ ಸ್ನೇಹಿತನನ್ನ ನೆನದು ಭಾವುಕ ಪೋಸ್ಟ್‌ ಹಾಕಿದ್ದಾರೆ.

ಫೋಟೋಗಳ ಜೊತೆ “Miss you every day…” ಎಂದು ರಿಯಾ ಬರೆದುಕೊಂಡಿದ್ದಾರೆ.

2020 ಜೂನ್​​ನಲ್ಲಿ ಮುಂಬೈನ ಬಾಂದ್ರಾ ಅಪಾರ್ಟ್​​ಮೆಂಟ್​ನಲ್ಲಿ 34 ವರ್ಷದ ಸುಶಾಂತ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ರಿಯಾ ಚಕ್ರವರ್ತಿಯಿಂದ ದೂರವಾಗಿ ಒಂದು ತಿಂಗಳ ಅವಧಿಯಲ್ಲಿ ಸುಶಾಂತ್​ ಸಿಂಗ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. 

ಪ್ರಕರಣದ ವಿಚಾರಣೆಯನ್ನ ಕೈಗೆತ್ತಿಕೊಂಡಿದ್ದ ಸಿಬಿಐ, ರಿಯಾ ಚರ್ಕವರ್ತಿ ಹಾಗೂ ಅವರ ಕುಟುಂಬಸ್ಥರನ್ನ ಬಂಧಿಸಿ ವಿಚಾರಣೆ ನಡೆಸಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link