ಬಚ್ಚನ್, ಕಪೂರ್ ಪರಿವಾರ ಅಲ್ಲ,ದೇಶದ ಅತ್ಯಂತ ಶ್ರೀಮಂತ ಸಿನಿ ಫ್ಯಾಮಿಲಿ ಇದು !12 ಸಾವಿರ ಮಂದಿಯನ್ನು ದತ್ತು ಪಡೆದಿರುವ ಉದಾರ ಪರಿವಾರ
)
ಈ ಕುಟುಂಬದಲ್ಲಿ ರಾಜಕಾರಣಿಯೂ ಇದ್ದಾರೆ ಸೂಪರ್ ಸ್ಟಾರ್ ಕೂಡಾ ಇದ್ದಾರೆ.ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬದಲ್ಲಿ ತಮ್ಮದೇ ಆದ ರೀತಿಯಲಿ ಹೆಸರು ಮಾಡಿದವರು.
)
ಇಲ್ಲಿ ನಾವು ಮಾತನಾಡುತ್ತಿರುವುದು ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಕುಟುಂಬದ ಬಗ್ಗೆ. ಇವರ ಅಲ್ಲು-ಕೊನಿಡೇಲ ಕುಟುಂಬ ಬಹಳ ಶ್ರೀಮಂತ ಕುಟುಂಬ ಎನ್ನುವುದರಲ್ಲಿ ಎರಡು ಮಾತಿಲ್ಲ.
)
ಮನರಂಜನಾ ಉದ್ಯಮದಲ್ಲಿ ಅತ್ಯಂತ ಶ್ರೀಮಂತ ಕುಟುಂಬವೆಂದರೆ ಅಲ್ಲು-ಕೊನಿಡೇಲಾ ಪರಿವಾರ.ಈ ಕುಟುಂಬ ಇಡೀ ತೆಲುಗು ಚಿತ್ರರಂಗವನ್ನೇ ಆಳುತ್ತಿದೆ. ಇದನ್ನು ಮೆಗಾ ಫ್ಯಾಮಿಲಿ ಎಂದೂ ಕರೆಯುತ್ತಾರೆ.
ಈ ಕುಟುಂಬದ ಸಿನಿ ಇತಿಹಾಸ ಆರಂಭವಾಗಿದ್ದು 1950ರಿಂದ. ಇದರ ಶ್ರೇಯಸ್ಸು ಖ್ಯಾತ ನಟ, ಚಲನಚಿತ್ರ ನಿರ್ಮಾಪಕ ಮತ್ತು ಹಾಸ್ಯನಟ ಅಲ್ಲು ರಾಮಲಿಂಗಯ್ಯನವರಿಗೆ ಸಲ್ಲುತ್ತದೆ.
ಅಲ್ಲು ರಾಮಲಿಂಗಯ್ಯನವರಿಗೆ ನಾಲ್ವರು ಮಕ್ಕಳು. ಅವರಲ್ಲಿ ಒಬ್ಬರು ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್.ಅವರ ಮಗನೇ ಅಲ್ಲು ಅರ್ಜುನ್.
ಚಿರಂಜೀವಿ ಈ ಕುಟುಂಬದ ಭಾಗ ಎನ್ನುವುದು ಇಲಿ ಗಮನಾರ್ಹ. ಅಲ್ಲು ರಾಮಲಿಂಗಯ್ಯನವರ ಮಗಳು ಸುರೇಖಾ. ಇವರು ಚಿರಂಜೀವಿ ಪತ್ನಿ. ಹಾಗಾಗಿ ಚಿರಂಜೀವಿ ಸಂಬಂಧದಲ್ಲಿ ಅಲ್ಲು ಅರ್ಜುನ್ ಚಿಕ್ಕಪ್ಪ. ಚಿರಂಜೀವಿ ಪೂರ್ಣ ಹೆಸರು ಕೊನಿಡೇಲ ಶಿವಶಂಕರ್ ವರಪ್ರಸಾದ್.
ಚಿರಂಜೀವಿ ಅವರ ಮಗ ರಾಮ್ ಚರಣ್.ರಾಮಚರಣ್ ಪತ್ನಿ ಉಪಾಸನಾ. ಉಪಾಸನಾ ಕೂಡ ದೇಶದ ಖ್ಯಾತ ಉದ್ಯಮಿ ಕುಟುಂಬದಿಂದ ಬಂದವರು.
ಚಿರಂಜೀವಿ ಅವರ ಒಡಹುಟ್ಟಿದವರ ಬಗ್ಗೆ ನೋಡುವುದಾದರೆ ಅವರಿಗೆ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದಾರೆ.ಕಿರಿಯ ಸಹೋದರ ಪವನ್ ಕಲ್ಯಾಣ್ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೊಬ್ಬ ಸಹೋದರ ನಾಗೇಂದ್ರ ಬಾಬು, ಸಹೋದರಿಯರಾದ ಮಾಧವಿ ಮತ್ತು ವಿಜಯ.
ಚಿರಂಜೀವಿ 2017 ರಲ್ಲಿ ಆಂಧ್ರಪ್ರದೇಶದ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದರು.ಈ ಗ್ರಾಮದ ಜನಸಂಖ್ಯೆ ಸುಮಾರು 12466.ಈ ಗ್ರಾಮವನ್ನು ಅಭಿವೃದ್ದಿ ಪಡಿಸುವ ಮೂಲಕ ಇಲ್ಲಿಯವರ ಭರವಸೆಯ ಕಿರಣವಾಗಿದ್ದಾರೆ.
ಮೂಲಗಳ ಪ್ರಕಾರ ಚಿರಂಜೀವಿಯ ಒಟ್ಟು ಸಂಪತ್ತು 1650 ಕೋಟಿ ರೂ. ಅವರು ಖಾಸಗಿ ಜೆಟ್, ಐಷಾರಾಮಿ ಮನೆ ಮತ್ತು ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.