ಭಾರತದ ಈ ಆಟಗಾರನೇ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ: ಕೊಹ್ಲಿ, ಸಚಿನ್, ಧೋನಿ ಆಸ್ತಿ ಒಟ್ಟು ಸೇರಿಸಿದ್ರೂ ಸರಿಸಮಾನ ಬರಲ್ಲ ಇವರ ಆದಾಯ!

Thu, 02 May 2024-3:13 pm,

ರಾಜಮನೆತನದವರು ಅರಮನೆಯ ಒಂದು ಭಾಗದಲ್ಲಿ ವಾಸಿಸುತ್ತಿದ್ದರೆ, ಇನ್ನೊಂದು ಭಾಗವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಇನ್ನು ಈ ಭಾಗವನ್ನು ಗಾಯಕ್ವಾಡ್ ಕುಟುಂಬದವರು ಮಹಾರಾಜ್ ಫತೇ ಸಿಂಗ್ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.

ಲಕ್ಷ್ಮಿ ವಿಲಾಸ ಅರಮನೆಯನ್ನು 1890 ರಲ್ಲಿ ಗಾಯಕ್ವಾಡ್ ರಾಜವಂಶದ ಮಹಾರಾಜ ಸಯಾಜಿರಾವ್ ಗಾಯಕ್ವಾಡ್-III ನಿರ್ಮಿಸಿದರು. ಪ್ರಸ್ತುತ ಮಹಾರಾಜ್ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಮತ್ತು ಅವರ ಪತ್ನಿ ಮಹಾರಾಣಿ ರಾಧಿಕಾ ರಾಜೇ ಗಾಯಕ್ವಾಡ್ ಅವರು ತಮ್ಮ ಕುಟುಂಬದೊಂದಿಗೆ ಈ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

ಲಕ್ಷ್ಮಿ ವಿಲಾಸ ಅರಮನೆಯು ಮರಾಠ ಸಾಮ್ರಾಜ್ಯದ ರಾಜವಂಶದ ಕೊಡುಗೆಯಾಗಿದೆ. ಒಂದು ಕಾಲದಲ್ಲಿ ಈ ಕುಟುಂಬ ವಡೋದರಾವನ್ನು ಆಳಿತ್ತು. ಇಂದು ಸಮರ್ಜಿತ್ ಸಿಂಗ್ ಗಾಯಕ್ವಾಡ್ ಈ ಅರಮನೆಯ ಮಾಲೀಕರಾಗಿದ್ದಾರೆ.

ಸಮರ್ಜಿತ್ ಸಿಂಗ್ ಗಾಯಕ್ವಾಡ್ 25 ಏಪ್ರಿಲ್ 1967 ರಂದು ಜನಿಸಿದ್ದು, ರಣಜಿತ್ ಸಿಂಗ್ ಪ್ರತಾಪ್ ಸಿಂಗ್ ಗಾಯಕ್ವಾಡ್ ಮತ್ತು ಶುಭಾಂಗಿನಿರಾಜೆ ಅವರ ಏಕೈಕ ಪುತ್ರ. ಡೆಹ್ರಾಡೂನ್‌’ನ ಡೂನ್ ಶಾಲೆಯಲ್ಲಿ ಓದಿದ ಸಮರ್ಜಿತ್ ಸಿಂಗ್ ಗಾಯಕ್ವಾಡ್, ಮಾಜಿ ಕ್ರಿಕೆಟಿಗ ಕೂಡ ಹೌದು.

2012ರಲ್ಲಿ ಅವರ ತಂದೆಯ ಮರಣದ ನಂತರ, ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮಹಾರಾಜರನ್ನಾಗಿ ಮಾಡಲಾಯಿತು. ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರ ಕುಟುಂಬವು 2013 ರಿಂದ ಈ ಅರಮನೆಯಲ್ಲಿ ವಾಸಿಸುತ್ತಿದೆ.

ಕ್ರಿಕೆಟ್ ಆಡುವ ಶ್ರೀಮಂತ ಭಾರತೀಯ ಎಂದರೆ ಸಮರ್ಜಿತ್ ಸಿಂಗ್ ರಣಜಿತ್ ಸಿಂಗ್ ಗಾಯಕ್ವಾಡ್. ಸಮರ್ಜಿತ್ ಸಿಂಗ್ ಗಾಯಕ್ವಾಡ್ ರಣಜಿ ಟ್ರೋಫಿಯಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದಾರೆ. ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು, ಬರೋಡಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಲಕ್ಷ್ಮಿ ವಿಲಾಸ್ ಅರಮನೆಯು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಗುರುತಿಸಲ್ಪಟ್ಟಿದೆ. ಇದರ ಅರಮನೆಯ ಒಟ್ಟು ವಿಸ್ತೀರ್ಣ 3,04,92,000 ಚದರ ಅಡಿ. ಲಂಡನ್‌’ನ ರಾಜಮನೆತನಕ್ಕೆ ಹೋಲಿಸಿದರೆ, ಬಕಿಂಗ್ಹ್ಯಾಮ್ ಅರಮನೆಯು 828,821 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಈ ಅರಮನೆಯನ್ನು ನಿರ್ಮಿಸಲು 12 ವರ್ಷಗಳು ತೆಗೆದುಕೊಳ್ಳಲಾಗಿದ್ದು, ಚಾರ್ಲ್ಸ್ ಫೆಲೋ ಚಿಶೋಲ್ಮ್ ಈ ಅರಮನೆಯನ್ನು ವಿನ್ಯಾಸಗೊಳಿಸಿದ್ದಾರೆ.

ಇನ್ನು ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ, ಲಕ್ಷ್ಮಿ ವಿಲಾಸ ಅರಮನೆಯನ್ನು ರೂ. 27,00,000 ಅಥವಾ 1,80,000 ಪೌಂಡ್‌ ವೆಚ್ಚ ಮಾಡಿ ನಿರ್ಮಿಸಲಾಗಿದೆ. ಈ ಅರಮನೆ ನಿರ್ಮಾಣವಾಗಿರುವ ಪ್ರದೇಶದಲ್ಲಿ ಪ್ರಸ್ತುತ ಆಸ್ತಿ ಬೆಲೆ ಚದರ ಅಡಿಗೆ 8000 ರೂ.

ಇಡೀ ಅರಮನೆ, ಉದ್ಯಾನ ಪ್ರದೇಶ, ಗಾಲ್ಫ್ ಕೋರ್ಸ್ ಇತ್ಯಾದಿಗಳನ್ನು ಒಳಗೊಂಡಂತೆ, ಈ ಅರಮನೆಯು ಸುಮಾರು 700 ಎಕರೆಗಳಷ್ಟು ವಿಸ್ತಾರವಾಗಿದೆ. ಸರಿಸುಮಾರು 3,04,92,000 ಚದರಡಿಯಲ್ಲಿ ಹರಡಿದೆ. ಈ ರೀತಿಯಲ್ಲಿ ಇದರ ಬೆಲೆ ಸುಮಾರು 2,43,93,60,00,000 ರೂ. ಅಂದರೆ ಈ ಅರಮನೆಯ ಬೆಲೆ ಸುಮಾರು 25,000 ಕೋಟಿ ರೂ. ಇದು ರಿಯಲ್ ಎಸ್ಟೇಟ್ ಮಾರುಕಟ್ಟೆ ದರದ ಪ್ರಕಾರ ಅಂದಾಜು ಬೆಲೆ ಮಾತ್ರ.

ಸಮರ್ಜೀತ್ ಸಿಂಗ್ ಅವರು 20000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮತ್ತು ರಾಜಾ ರವಿವರ್ಮಾ ಅವರ ಅನೇಕ ಪೇಂಟಿಂಗ್‌ಗಳನ್ನು ಕುಟುಂಬದಿಂದ ಪಡೆದಿದ್ದಾರೆ. ಇದರ ಜೊತೆ ಗಾಯಕ್ವಾಡ್ ಕುಟುಂಬವು ಗುಜರಾತ್ ಮತ್ತು ವಾರಣಾಸಿಯ 17 ದೇವಾಲಯಗಳ ಟ್ರಸ್ಟ್ ಅನ್ನು ಸಹ ನಿರ್ವಹಿಸುತ್ತದೆ.

2014 ರಲ್ಲಿ ಬಿಜೆಪಿ ಸೇರಿದ ಸಮರ್ಜೀತ್ ಸಿಂಗ್, 2017 ರಿಂದ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಇನ್ನು 2002 ರಲ್ಲಿ, ರಾಜಕುಮಾರಿ ರಾಧಿಕರಾಜೆಯನ್ನು ವಿವಾಹವಾದ ಸಮರ್ಜೀತ್, ಇಬ್ಬರು ಹೆಣ್ಣು ಮಕ್ಕಳ ತಂದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link